
ನನಗೆ ಅನಿಸುತ್ತೆ, ನಾವು ನೀವು ಎಲ್ಲೋ ಇರ್ತಿವಿ ಫೋನ್ ನಲ್ಲಿ ಮಾತಾಡ್ತೀವಿ ಅದು ಹೇಗೆ ಸಾದ್ಯ ???? ಯಾರೋ ಫೋನ್ ಅನ್ನೋದನ್ನ ಕಂಡು ಹಿಡಿದ್ರು ಇವತ್ತು ನಾವು ನಮ್ಮಿಂದ ಎಸ್ಟೋ ದೂರ ಇರೋರ್ ಜೊತೆ ಮಾತಡ್ತಿವಿ ಇದಕ್ಕೆಲ್ಲ ಕಾರಣ ಮನುಷ್ಯನ ಬುದ್ಧಿ ಶಕ್ತಿ, ಕಣ್ಣಿಗೆ ಕಾಣದ ತರಂಗಗಳು...!
ಹಾಗೆ "ಮನುಷ್ಯ ಅನ್ನೋ ಮನುಷ್ಯನಲ್ಲಿರುವ ಮನಸ್ಸುಗಳಿಗೂ ಮನಸ್ಸು ಅಂತ ಇರುತ್ತೆ ಆ ಮನಸುಗಳು ಸಹ ಮನಸ್ಸಲ್ಲಿ ಇರೋ ಮನಸ್ಸಿನೊಂದಿಗೆ ಮನಸ್ಸು ಕೊಟ್ಟು ಮನಸಾರೆ ಮನಸ್ಸು ಬಿಚ್ಚಿ ಮಾತಾಡುತ್ತವೆ" ಆ ಮನಸ್ಸುಗಳ ನಡುವೆ ನನಗೂ ನಿಮಗೂ ಗೊತ್ತಿಲ್ದೆ ಇರೋ ಯಾವ್ದೋ ಒಂದು ಅದ್ಬುತ ಶಕ್ತಿ ತರಂಗಗಳ ಮೂಲಕ ಮನಸುಗಳ ಮಿಲನಕ್ಕೆ ನಾಂದಿಯಾಗಿದೆ....!
ನೀವು ಗಮನಿಸಿರ್ತಿರ ಅವಳಿ ಜವಳಿ ಮಕ್ಕಳು ಇದ್ರೆ ಒಬ್ಬ ಮಗುಗೆ ಜ್ವರ ಬಂದ್ರೆ ಇನ್ನೊದು ಮಗು ಎಷ್ಟೇ ದೂರ ಇದ್ರೂ ಆ ಮಗುಗು ಜ್ವರ ಬಂದಿರುತ್ತೆ ಈ ಥರ ಉದಾಹರಣೆಗಳು ಸಿನಿಮಾಗಳಲ್ಲಿ ತುಂಬಾ ಇವೆ ಅದು ನಮಗೂ ಗೊತ್ತು ಆದರೆ ಅದಕ್ಕೆ ತಜ್ಞರು ಅವರದೇ ಆದ ರೀತಿನಲ್ಲಿ ವಿವರಣೆ ನಿಡ್ತಾರೆ ಅದಕ್ಕೆ ನಾವು ವಿಜ್ಞಾನ ಅಂತಿವಿ ಅದೇ ಒಬ್ಬ ಹಳ್ಳಿಯವ ಅದರ ಬಗ್ಗೆ ತನ್ನ ಮಾತಿನಲ್ಲಿ ಸರಳವಾಗಿ ವಿವರಣೆ ಕೊಟ್ರೆ ಅದೇ ನಾವೇ ಅಜ್ಞಾನ, ಮೋಡ ನಂಬಿಕೆ ಅಂತೆಲ್ಲ ಕರಿತಿವಿ ಅಲ್ವ ..!
ಈಗ್ಲೂ ಕಾಲ ಮಿಂಚಿಲ್ಲ ನಿಮಗೂ ಬಿಕ್ಕಳಿಕೆ ಬರುತ್ತೆ ಬಂದಾಗ ಒಂದು ಸಾರಿ ನಿಮ್ಮನ್ನ ಇಷ್ಟ ಪಡೋ ಇಲ್ಲಾ ನಿಮ್ಮ ಮನಸ್ಸಲ್ಲಿರೋ ಹೆಸರನ್ನ ನೆನೆಸಿಕೊಂಡು ನೋಡಿ ಮನಸ್ಸುಗಳ ತರಂಗದ ಅರಿವು ನಿಮಗೂ ಆಗುತ್ತೆ..!
ಮನಸ್ಸಲ್ಲಿ ಇರೋರು ಅಂದ್ರೆ ಲವರ್ ಅಂತ ಎಷ್ಟೋ ಜನ ತಪ್ಪು ಕಲ್ಪನೆಯಲ್ಲಿ ಮುಳುಗಿದರೆ, ನಿಮ್ಮನ್ನ ನೆನಪು ಮಾಡಿಕೊಳ್ಳೋಕೆ ನಿಮ್ನ ಪ್ರೀತಿ ಮಾಡ್ತಾ ಇರೋರೆ ಆಗಬೇಕು ಅಂತ ಇಲ್ಲಾ ತಾಯಿ, ತಂದೆ, ಅಕ್ಕ ತಮ್ಮ ಇಲ್ಲಾ ಎಂದೋ ಬಸ್ ಸ್ಟಾಪ್ ನಲ್ಲಿ ಸಿಕ್ಕು ಪರಿಚಯ ಆಗಿ ಇವತ್ತು ನಿಮ್ ಜೊತೆ ಸಂಪರ್ಕದಲ್ಲಿ ಇಲ್ದೇ ಇರೋರು ಆಗಿರಬಹುದು, ಇಲ್ಲಾ ನಿಮ್ಮ ಕಲ್ಪನೆಯಲ್ಲಿ ಹುಟ್ಟಿಕೊಂಡ ನಿಮ್ಮ ಬಾಳ ಸಂಗಾತಿಯಾಗಿರಬಹುದು ಅಂತಹ ಪಾತ್ರಗಳಿಗೆ ನಾನು ಮರೀಚಿಕೆ..♥...♥...♥ ಅಂತ ಕರೆಯೋಕೆ ಇಷ್ಟ ಪಡ್ತೀನಿ.