ಕಷ್ಟಗಳು ಬರುತ್ತವೆ ಹೋಗುತ್ತವೆ .ಅದನ್ನು ಎದುರಿಸಿ ಮುಂದೆ ನಡೆಯವದನ್ನು ನಾವು ಕಲಿಯ ಬೇಕು . ಇಂದು ಕತ್ತಲು ಆದ್ರೆ ನಾಳೆ ಬೆಳಕು ಆಗೇ ಆಗುತ್ತದೆ ."Every sucussfull person has a painfull story Every painfull story has a sucussfull endinding "
Monday, February 1, 2010
ಐದೇ ಐದು ನಿಮಿಷ .................
ನಾನು ಕೆಲ್ಸಾ ಮಾಡೋ ಕಂಪ್ಯೂಟರ್ರುಗಳ ಸ್ಪೀಡೂ ಪ್ರಾಸೆಸ್ಸರ್ರುಗಳ ಪವರ್ರು ಜಾಸ್ತೀ ಆದ ಹಾಗೆ, ನಾನು ಉಪಯೋಗಿಸೋ ಸಾಫ್ಟ್ವೇರ್ ಅಥವಾ ಅಪ್ಲಿಕೇಷನ್ನುಗಳ ವರ್ಷನ್ನುಗಳು ಹೆಚ್ಚಾದ ಹಾಗೆ ನನ್ನ ಧಕ್ಷತೇನೂ ಹೆಚ್ಚಾಗುತ್ತೇ ಅನ್ನೋದು ಬರೀ ಕನಸೇ ಆಗಿ ಹೋಗಿದೆ ಅನ್ನೋದು ಇತ್ತೀಚಿನ ನನ್ನ ಕೊರೆತಗಳಲ್ಲೊಂದು! ಯಾವಾಗ್ ನೋಡಿದ್ರೂ ’ಟೈಮೇ ಇಲ್ಲಾ ಸಾರ್!’ ಎಂದು ರಾಗ ಎಳಿತಾ ಇರೋ ನನಗೆ ನನ್ನ ಇದ್ದ ಬದ್ದ ಟೈಮ್ ಎಲ್ಲಾ ಎಲ್ಲಿ ಕರಗಿ ಹೋಗುತ್ತೇ ಅನ್ನೋದು ಹೊಳೆಯದೇ ಬಹಳ ಸಂಕಷ್ಟಕ್ಕೆ ಬಂದಿರೋದರ ಜೊತೆಗೆ ಟೈಮೇ ಇಲ್ಲವಲ್ಲ ಅಂಥ ಯೋಚಿಸೋದಕ್ಕೂ ಟೈಮ್ ಇಲ್ಲದ ಹಾಗೆ ಆಗಿದೆ ಅನ್ನೋದು ನನ್ನ ಹೊಸ ಕೀರ್ತನೆ ಅಷ್ಟೇ.ನೀವೇ ನೋಡಿ, ಯಾವತ್ತಾದ್ರೂ ಎಲ್ಲಿಗೋ ಹೊರಟಿರೋ ಹೊತ್ತಿನಲ್ಲಿ ಒಂದು ನಿಮಿಷ ಕಂಪ್ಯೂಟರಿನಲ್ಲಿ ಏನೋ ನೋಡೋಣ ಅಂತ ಕೂತಿರೋದಷ್ಟೇ ನೆನೆಪು, ಅದು ಹೇಗೆ ನಿಮಿಷಗಳು-ಘಂಟೆಗಳು ಉರುಳುತ್ತವೋ ಗೊತ್ತೇ ಆಗಲ್ಲ. ದಿನಾ ಆನ್ ಮಾಡಿ ಆಫ್ ಮಾಡೀರೋ ಕಂಪ್ಯೂಟರಿನಿಂದ ಹಿಡಿದು ಎರಡು ವಾರಕ್ಕೊಮ್ಮೆ ಸ್ಟ್ಯಾಂಡ್ ಬೈ ಮೋಡ್ ನಲ್ಲೇ ಇರೋ ನನ್ನ ಲ್ಯಾಪ್ಟಾಪಿನ ವರೆಗೆ ಅದರಲ್ಲಿರೋ ಅಪ್ಲಿಕೇಷನ್ನಿನ ಗೊಂಚಲುಗಳಲ್ಲಿ ಒಬ್ಬನಲ್ಲ ಒಬ್ಬನು ಏನನ್ನಾದರೊಂದನ್ನು ಇನ್ಸ್ಟಾಲ್ ಮಾಡಿಕೊಂಡೇ ಇರ್ತಾನೆ. ಆಂಟಿ ವೈರಸ್ಸು ಪ್ಯಾಚುಗಳಿಂದ ಹಿಡಿದು ಅಪ್ಲಿಕೇಶನ್ನ್ ಪ್ಯಾಚುಗಳವರೆಗೆ ಸದಾ ಕರಕರಕರ ಶಬ್ದ ಮಾಡ್ತಾ ಹಾರ್ಡ್ ಡ್ರೈವ್ ತಿರುಗೋ ಶಬ್ದವನ್ನು ಕೇಳ್ದೇ ಇದ್ರೆ ತಿಂದ ಅನ್ನಾನೇ ಅರಗಲ್ಲ. ಹೀಗೆ ಅವರು ಬಿಟ್ಟು ಇವರು ಬಿಟ್ಟು ಯಾರ್ಯಾರೋ ಏನನ್ನೋ ಇನ್ಸ್ಟಾಲ್ ಮಾಡಿ ಅನಂತರ ಕಂಪ್ಯೂಟರಿನ ಪ್ರಾಸೆಸ್ಸರು ಫ್ರೀ ಇರೋ ಹೊತ್ತಿಗೆ ದಿನವೇ ಮುಗಿದು ಹೋಗಿರುತ್ತೆ. ಮೊದಲೆಲ್ಲ ಸರಳವಾಗಿದ್ದ ಇ-ಮೇಲ್ ಇಂಟರ್ಫೇಸುಗಳು ಈಗ ಇನ್ನಷ್ಟು ಸಂಕೀರ್ಣಗೊಂಡಿವೆ, ಮೊದಲೆಲ್ಲ ಡಿಸ್ಟಿಂಕ್ಟ್ ಆಗಿ ಸಿಗುತ್ತಿದ್ದ ವ್ಯವಸ್ಥೆಯ ಪರಿಕರಗಳೆಲ್ಲ ಒಂದಕ್ಕೊಂದು ಇಂಟೆಗ್ರೇಟ್ ಆದ ಮೇಲೆ ಇಷ್ಟೆಲ್ಲ ತಲೆ ನೋವು ಬಂದಿದ್ದು ಅನ್ನೋದು ನನ್ನ ಅಂಬೋಣ.ಕಳೆದ ನಾಲ್ಕು ವಾರಗಳಿಂದ ಅವರ ಕಾಲ್ ಹಿಡಿದು ಇವರ ಕೈ ಹಿಡಿದು ಆಫೀಸಿನಲ್ಲಿ ಪರ್ಚೇಸ್ ಆರ್ಡರ್ ಒಂದನ್ನು ಇನ್ನೇನು ಕೊನೆಯ ಹಂತದವರೆಗೆ ತಂದೆ, ಮೇಲಿನವರ ಅಪ್ರೂವಲ್ ಸಿಕ್ಕೇ ಬಿಟ್ಟಿತು ಎಂದು ಮೀಸೇ ಮೇಲೆ ಕೈ ಹಾಕಿ ನಗುವನ್ನು ತಂದುಕೊಂಡಿದ್ದೇ ಬಂತು, ಅಪ್ರೂವ್ ಮಾಡುವವರು ಅಪ್ರೂವ್ ಮಾಡುವ ಸಿಸ್ಟಮ್ಗೆ ಲಾಗ್ ಇನ್ ಮಾಡಲು ಹೋದರೆ ಅಲ್ಲಿ ಬ್ಯಾಕ್ ಎಂಡಿನಲ್ಲಿ ಮೈಕ್ರೋ ಸಾಫ್ಟ್ನವರ ಸರ್ವರ್ ಮುಷ್ಕರ ಹೂಡಿ ಕುಳಿತುಕೊಂಡಿದೆ. ಸಾಯಂಕಾಲ ಎಷ್ಟೊತ್ತು ಕಾದರೂ ಸರ್ವರ್ ಎದ್ದು ಬರುವಂತೆ ಕಾಣಲಿಲ್ಲ, ನಾಳೆ ಈ ಅಪ್ರೂವ್ ಮಾಡುವ ಮನುಷ್ಯ ಬೇರೆ ಆಫೀಸಿನಲ್ಲಿ ಇಲ್ಲ, ಅವನು ಇನ್ಯಾವನಿಗೆ ಹೀಗೆ ಮಾಡು ಹಾಗೆ ಮಾಡು ಎಂದು ಹೇಳಿ, ಹೇಳಿಸಿಕೊಂಡವನು ನನ್ನ ಅನುಕೂಲಕ್ಕೆ ಸ್ಪಂದಿಸಿ ’ಅಪ್ರೂವ್ ಆಯ್ತು’ ಎಂದು ಬಟನ್ ಒತ್ತುವಷ್ಟರಲ್ಲಿ ನನ್ನ ತಲೆ ಕೂದಲೆಲ್ಲ ಬೆಳ್ಳಗಾಗದಿದ್ದರೆ ಸಾಕು. ಒಂದೊಂದು ಸರ್ವರ್ರುಗಳು ಅಂದ್ರೆ ಅದೆಷ್ಟು ಪವರ್ ಇರುವ ಮೆಷಿನುಗಳು, ಅಂಥವು ದಿನಕ್ಕೊಂದಲ್ಲ ಒಂದು ಔಟ್ ಆಗುತ್ತಲೇ ಇರುತ್ತವೆ, ಅದನ್ನ ಅಡ್ಮಿನಿಶ್ಟ್ರೇಷನ್ನವರು ಬೌನ್ಸ್ ಮಾಡಿ ಮತ್ತೆ ಜೀವ ಕೊಡುತ್ತಲೇ ಇರುತ್ತಾರೆ. ಹೀಗೆ ನಮ್ಮ ದೈನಂದಿನ ಚಟುವಟಿಕೆಗಳೆಲ್ಲ ಕ್ಲೈಂಟು-ಸರ್ವರುಗಳ ಕೈಂಕರ್ಯಕ್ಕೆ ಅದೆಷ್ಟು ಹೊಂದಿಕೊಂಡಿವೆ ಅಂದರೆ ಇನ್ನೊಂದು ಕೆಲವು ವರ್ಷಗಳಲ್ಲಿ ಸಾಯೋರಿಗೂ ಪರ್ಮಿಷನ್ನ್ ಸಿಗುವ ಹಾಗೆ ಮಾಡುತ್ತವೆ ಈ ಸರ್ವರುಗಳು ನೋಡ್ತಾ ಇರಿ.ಐದೇ ಐದು ನಿಮಿಷ ಅಂತ ಯಾರೂ ಹೇಳೋದಿಲ್ಲ ಬಿಡಿ...’ಒಂದು ನಿಮಿಷ ಬಂದೇ ಬಿಟ್ಟೇ!’ ಅಂತಾರೆ, ಆದರೆ ಘಂಟೆಗಟ್ಟಲೆ ಆದ್ರೂ ತಮ್ಮ ಪ್ರಪಂಚದಿಂದ ಹೊರಗೆ ಬರೋದಿಲ್ಲ. ಒಂದು ನಿಮಿಷ, ಒಂದು ಸೆಕೆಂಡು ಅನ್ನೋ ಮಾತುಗಳು ಔಪಚಾರಿಕ ಮಾತುಕಥೆಗಳಾಗಿವೆ ಅಷ್ಟೇ. ನಾವೆಲ್ಲ ’ಒಂದ್ ಸೆಕೆಂಡ್’ ಅನ್ನೋದನ್ನ ಯಾರಾದ್ರೂ ಬೇರೆ ಗ್ರಹದ ಪ್ರಾಣಿಪಕ್ಷಿಗಳು ಕೇಳಿಕೊಂಡವು ಅಂತಂದ್ರೆ ಅವರ ಹೃದಯ ನಿಂತು ಹೋಗೋದು ಗ್ಯಾರಂಟಿ - ಅದೇನು ಒಂದು ಸೆಕೆಂಡಿನಲ್ಲಿ ಅದೇನೇನೆಲ್ಲ ಮಾಡ್ತಾರಲ್ಲ ಅಂತ. ನಮ್ಮ ಒಂದೊಂದು ಸೆಕೆಂಡುಗಳು ’ಬ್ರಹ್ಮ ಶೌಚ’ದ ಯೂನಿಟ್ನಲ್ಲಿವೆ ಅನ್ನೋದು ಅವರಿಗೇನು ಗೊತ್ತು?ಯಾವ್ದೇ ಮ್ಯಾಪ್ ಅಪ್ಲೋಡ್ ಮಾಡಿ, ಯಾವ್ದೇ ಇ-ಮೇಲ್ ಕ್ಲೈಂಟ್ ಹೊರಗೆ ತನ್ನಿ, ಯಾವ್ದೇ ವೆಬ್ ಪೇಜ್ ಮೇಲೆ ಕಣ್ಣಾಡಿಸಿ - ಅದು ನಿಧಾನವಾಗಿ ಲೋಡ್ ಆಗುತ್ತಿದ್ದರೆ ನಿಮ್ಮ ಇಂಟರ್ನೆಟ್ ಕನೆಕ್ಷನ್ನನ್ನೋ ಅಥವಾ ಹಳೆಯ-ಹೊಸ ಕಂಪ್ಯೂಟರನ್ನ ನೀವು ಬೈದುಕೊಳ್ಳೋ ಸನ್ನಿವೇಶ ಬಂದೇ ಬರುತ್ತೆ. ’ಕನ್ನಡಪ್ರಭ’, ’ಪ್ರಜಾವಾಣಿ’ ಅಂಥ ವೆಬ್ಸೈಟ್ಗಳು ASP ತಂತ್ರಜ್ಞಾನವನ್ನು ಮೊರೆಹೊಕ್ಕರು, ಅವರಿಗೆಲ್ಲ ಅದರಿಂದ ಏನೇನು ಅನುಕೂಲವಾಗಿದೆಯೋ ಬಿಟ್ಟಿದೆಯೋ User friendliness ಮಾತ್ರ ಮಾಯವಾಗಿ ಬಿಟ್ಟಿದೆ. ಹನ್ನೊಂದು ವರ್ಷದ ಹಿಂದೆ ನನ್ನ ಪೆಂಟಿಯಮ್ 166 MHz ಕಂಪ್ಯೂಟರಿನಲ್ಲಿ 56 Mbps ಡಯಲ್ ಅಪ್ ಕನೆಕ್ಷನ್ನ್ ನಲ್ಲಿ ನನಗೆ ವೆಬ್ಸೈಟ್ ಓದುವಾಗ ಸಿಗುತ್ತಿದ್ದ ಫ್ರೀಡಮ್ ಈಗ ಕಡಿಮೆ ಆಗಿದೆ. ಆಗೆಲ್ಲ HTML ಪುಟಗಳಲ್ಲಿ ಆಡ್ರಸ್ ಬಾರ್ ನಲ್ಲಿ ಯಾವ ಯಾವ ದಿನದ ಪತ್ರಿಕೆಗಳ ದಿನಾಂಕಗಳನ್ನೆಲ್ಲ ಹಾಕಿಕೊಂಡು ಎಲ್ಲಿಂದ ಎಲ್ಲಿಗೆ ಬೇಕಾದ್ರೂ ನೇವಿಗೇಟ್ ಮಾಡುತ್ತಿದ್ದ ನನಗೆ ಇಂದಿನ ASP ಯುಗದಲ್ಲಿ ದಿಕ್ಕೇ ತೋಚದ ಹಾಗಾಗುತ್ತೆ ಎಷ್ಟೋ ಸಲ. ಅದೂ ಅಲ್ದೇ ಯಾವ್ದಾದ್ರೂ ಫ್ಲಾಶ್ ಇರೋ ಪುಟಕ್ಕೆ ಹೋದ್ರಂತೂ ಆ ಪುಟದಲ್ಲಿ ಉಪಯೋಗಿಸಿರೋ ಫ್ಲ್ಯಾಶ್ ವರ್ಶನ್ ನನ್ನ ಹತ್ರ ಇರೋಲ್ಲ, ಅವರ ಪುಟಗಳನ್ನು ನೋಡೋಕೆ ಮತ್ತೊಂದೇನನ್ನ ಇನ್ಸ್ಟಾಲ್ ಮಾಡೂ ಅಂತಾನೆ, ಅವನು ಹೇಳಿದ್ದನ್ನ ಕೇಳಿದ್ರೆ ಇನ್ನೊಬ್ರ ಪುಟ ಮತ್ತೆನ್ನೆಲ್ಲೋ ಸರಿಯಾಗಿ ಲೋಡ್ ಆಗಲ್ಲ, ಬ್ಯಾಕ್ವರ್ಡ್ ಕಂಪ್ಯಾಟಿಬಿಲಿಟಿ ಇದ್ರೆ ಫಾರ್ವರ್ಡ್ ಇರಲ್ಲ, ಇವನನ್ನ ಓಲೈಸಿದ್ರೆ ಮತ್ತೊಬ್ಬನಿಗೆ ಸಿಟ್ಟು ಬರುತ್ತೆ ಅನ್ನೋ ಹಾಗೆ.ಇವತ್ತೆಲ್ಲ 3-4 GB RAM ಇರೋ ಲ್ಯಾಪ್ ಟಾಪ್ಗಳೇ ಸಿಕ್ತಾವೆ, ಅವೇ ಹಲ್ಲು ಕಿರಿದು ನಿಲ್ಲೋ ಜನರ ಫೋಟೋ ಹೊಡೆಯೋಕೆ ಹದಿನೈದ್ ಪಿಕ್ಸೆಲ್ ವರೆಗಿನ ಕ್ಯಾಮರಾಗಳು ಬಂದಿರಬಹುದು. ಒಂದೊಂದು ಫೋಟೋ ಸೈಜೂ ಹತ್ತು MB ಆಗುತ್ತೋ ಏನೋ, ಅವನ್ನ ಸ್ಟೋರ್ ಮಾಡೋಕೆ, ಕಳಿಸೋಕೆ, ಬಳಸೋಕೆ ಹೆಚ್ಚು ಹೆಚ್ಚು ಜಾಗ ಬೇಕು, ಮೆಮರಿ ಬೇಕು - ಎಲ್ಲಿಂದ ತರಾಣಾ? ಹೊಸ ಕ್ಯಾಮರ ಕೊಂಡ್ರೆ ಹೊಸ ಕಂಪ್ಯೂಟರ್ ಬೇಕು ಅಂತ ಆಗುತ್ತೆ, ಹೊಸ ಕಂಪ್ಯೂಟರ್ ಕೊಂಡ್ರೆ ಹೊಸ ಸಾಫ್ಟ್ವೇರ್ ಬೇಕು ಅಂತ ಆಗುತ್ತೆ, ಹೊಸ ಸಾಫ್ಟ್ವೇರ್ ಸಿಕ್ರೆ ನಮಗೆ ಬೇಕಾದ್ದ್ ಎಲ್ಲ ಇರಲ್ಲ, ಇದೂ ಅದೆಲ್ಲೆಲ್ಲೋ ಹುದುಗಿಸಿ ಇಡ್ತಾರೆ - ಹೊಸದರ ಜೊತೆಗೆ ಹಳೆಯದು ಕೆಲ್ಸಾ ಮಾಡಲ್ಲ...ಹೀಗೆ ಇದರ ಪಟ್ಟಿ ಇಲ್ಲಿಗೆ ನಿಲ್ಲದೆ ಮುಂದೆ ಬೆಳಿಯುತ್ಲೇ ಇರುತ್ತೆ. ನಾನು ಇವತ್ತೇ ಹೋಗಿ ಸ್ಯಾಮ್ಸ್ ಕ್ಲಬ್ಬಿನಿಂದ ಏಳ್ನೂರ್ ಡಾಲರ್ ಕೊಟ್ಟು ಹೊಸ ಕಂಪ್ಯೂಟರ್ ತಂದು ಬಿಸಾಕೇನು, ಅದನ್ನ ಸಂಪೂರ್ಣವಾಗಿ ಕಷ್ಟಮೈಜ್ ಮಾಡಿ ನನಗೆ ಬೇಕಾದ್ದನ್ನೆಲ್ಲ ಇನ್ಸ್ಟಾಲ್ ಮಾಡಿ ರನ್ ಮಾಡೋ ಅಷ್ಟೊತ್ತಿಗೆ ನನ್ನ ಒಂದು ದಶಕದ ಆಯಸ್ಸೇ ಮುಗಿದು ಹೋಗುತ್ತೆ, ಅಷ್ಟೊತ್ತಿಗೆ ಆ ಕಂಪ್ಯೂಟರ್ರೇ ಹಳೆಯದಾಗಿರುತ್ತೆ. ಇವುಗಳ ಮುಂದೆ ಯಾವತ್ತೂ ಗೆಲ್ಲೋಕೇ ಆಗಲ್ಲ ಅನ್ಸಲ್ವಾ?ನಮ್ ಜೀವ್ನಾ ಎಲ್ಲಾ ಐದೇ ಐದ್ ನಿಮಿಷ ಅಂದು ಒಂದೊಂದು ಘಂಟೆ ಸವೆಸೋದ್ರಲ್ಲೇ ಆಗ್ ಹೋಯ್ತು, ಇನ್ನು ಮುಂದಿನ ಜನರೇಷಿನ್ನಿನ ಕಥೆ ದೇವ್ರೇ ಕಾಪಾಡ್ ಬೇಕು.ನಾವು ಸಾಮಾನ್ಯರು, ನಮಗೆ ಹೆಚ್ಗೆ ಪವರ್ ಬೇಡಾ, ಇವತ್ತು ಸಾವಿರ ಡಾಲರ್ ಕೊಟ್ಟು ತಂದ ಕಾರು ಇನೈದು ವರ್ಷ ಬಿಟ್ರೂ ಇವತ್ತಿನ ಹಾಗೇ ಓಡಾಡೋಲ್ವೇ ಅದೇ ಥರ ಈ ಕಂಪ್ಯೂಟರಿಗೊಂದು ಹೊಸ ಇಕ್ವೇಷನ್ನ್ ತಂದು, ’ಇಲ್ಲಿಗೆ ಸಾಕು, ಶಿವಾ’ ಅನ್ನೋ ಒಂದು ಕಾನ್ಫಿಗರೇಷನ್ನಿಗೆ ನಿಲ್ಲಿಸಿಬಿಡಿ, ಅಷ್ಟೇ ಸಾಕು. ಜಗತ್ತಿನ ಒಂದೊಂದು ಇಂಚನ್ನೂ IP ಅಡ್ರಸ್ಸುಗಳಿಂದ ಅಳೀತೀವಿ ಅನ್ನೋ ಜನರಿಗೆ ಯಾವನೋ ಎಲ್ಲೋ ಬರೆದ ಕಂಪ್ಯೂಟರ್ ವೈರಸ್ಸುಗಳನ್ನು ಕಂಡು ಹಿಡಿಯೋದ್ ಕಷ್ಟಾನೇ? ಹಾಗೆ ವೈರಸ್ಸುಗಳನ್ನು ಬರೆದು ಜನರನ್ನು ಹಿಂಸಿಸೋರನ್ನ ಪಬ್ಲಿಕ್ನಲ್ಲಿ ಕಲ್ ತಗೊಂಡ್ ಹೊಡೀರಿ ಅವಾಗ್ಲಾದ್ರೂ ಜನರಿಗ್ ಬುದ್ಧಿ ಬರುತ್ತೋ ಏನೋ. ನಮ್ಮ್ ನಮ್ಮ್ ಇ-ಮೇಲ್ ನೋಡ್ಕೊಂಡು ಜೀವ್ನಾ ಸಾಗ್ಸದೇ ಕಷ್ಟಾ ಅನ್ಸಿರುವಾಗ ಅದ್ಯಾವನಿಗೆ ಅದೆಲ್ಲಿಂದ ವೈರಸ್ ಬರೆಯೋಕ್ ಟೈಮ್ ಸಿಗುತ್ತೋ ಯಾರಿಗ್ ಗೊತ್ತು?
೬೨ನೆ ಸ್ವಾತಂತ್ರೋತ್ಸವ .........

ಸ್ವಾತಂತ್ರ್ಯೋತ್ಸವಗಳನ್ನು ಟಿವಿಯಲ್ಲಿ ನೋಡ್ತಾ ಇದ್ದಾಗ, ವರದಿಗಳನ್ನು ಓದ್ತಾ ಇದ್ದಾಗ ನಮ್ಮದು ಕೇವಲ 62 ವರ್ಷದ ಸ್ವಾತ್ಯಂತ್ರ್ಯ ಅಷ್ಟೇ ಅಂತ ಅನ್ಸಿದ್ದು ವಿಶೇಷ. ಈ ಹಿಂದೆ ನನಗೆ ನೆನಪಿರೋ ಹಾಗೆ ನಮ್ಮ ಹೈ ಸ್ಕೂಲು ದಿನಗಳಿಂದ ಹಿಡಿದು ನಲವತ್ತು, ಐವತ್ತು, ಅರವತ್ತು ವರ್ಷಗಳ ಆಚರಣೆಗಳನ್ನು ಮಾಡಿ-ನೋಡಿದ್ದರೂ ಈಗ ಅನ್ನಿಸ್ತಿರೋ ಹಾಗೆ ನಮ್ಮ ದೇಶ ಬ್ರಿಟೀಷರಿಂದ ಸ್ವಾತ್ರಂತ್ರ್ಯ ಪಡೆದದ್ದು ರಿಲೇಟಿವ್ ಆಗಿ ಇತ್ತೀಚೆಗೆ ಅನ್ನೋ ಭಾವನೆ ಬಲವಾಗ್ತಿದೆ.ಈ ಆರು ದಶಕಗಳ ಸ್ವಾತಂತ್ರ್ಯದಲ್ಲಿ ನನಗೆ ಗೊತ್ತಿರೋ ಹಾಗೆ ಎರಡು-ಮೂರು ದಶಕಗಳನ್ನು ಚೆನ್ನಾಗಿ ಗಮನಿಸಿದರೆ, ಅದರಲ್ಲೂ ನಮ್ಮ ವಯಸ್ಸಿನವರಿಗೆ ಅನ್ವಯವಾಗುವ ಎಂಭತ್ತು ಹಾಗೂ ತೊಂಭತ್ತರ ದಶಕಗಳಲ್ಲಿ ಭಾರತ ಬಹಳಷ್ಟು ಬೆಳೆದಿದೆ. ತದನಂತರ ಎರಡು ಸಾವಿರದ ದಶಕದಲ್ಲಂತೂ ಎಲ್ಲಾ ಬೆಳವಣಿಗೆಗಳು ಮುಗಿಲು ಮುಟ್ಟಿದವು ಎಂದೇ ಹೇಳಬೇಕು. ನಾವು ಪಾಕಿಸ್ತಾನದವರ ಹಾಗೆ ಸ್ವಾತಂತ್ರ್ಯ ಸಿಕ್ಕ ಮೊದಲನೇ ದಿನದಿಂದ ವಿದೇಶಿಯರಿಗೆ ನಮ್ಮ ಮಾರ್ಕೆಟ್ಟುಗಳನ್ನು ತೆರೆದುಕೊಳ್ಳಲಿಲ್ಲ, ಎಂಭತ್ತು ಹಾಗು ತೊಂಭತ್ತರ ದಶಕದ ಅಂತ್ಯದವರೆಗೂ ಎಲ್ಲವೂ ಸರ್ಕಾರೀ ಸ್ವಾಧೀನದಲ್ಲೇ ಇತ್ತು. ಇಂದಿಗೂ ಸಹ ಬೇಕಾದಷ್ಟು ರಂಗಗಳಲ್ಲಿ ಸರ್ಕಾರಿ ಹಿಡಿತವಿದೆ. ನಮ್ಮ ದೇಶಕ್ಕೆ ವಿದೇಶಿ ಸರಕುಗಳು ನಿಧಾನವಾಗಿ ಬಂದವು. ರಕ್ಷಣಾ ತಂತ್ರಜ್ಞಾನವೇನೋ ಮೊದಲೇ ತೆರೆದುಕೊಂಡಿತು, ಆದರೆ ಮಿಕ್ಕವು ತಡವಾಗಿದ್ದಂತೂ ನಿಜ.ಈ ಜಾಗತೀಕರಣ ಅನ್ನೋ ನಾಣ್ಯಕ್ಕೆ ಎರಡು ಮುಖಗಳಿದ್ದರೆ, ಅದರಲ್ಲಿ ಮೊದಲನೆಯದು ಒಂದು ದೇಶದ ಒಳಗಿನಿಂದ ಹೊರಹೋಗುವುದನ್ನು ಪ್ರತಿಬಿಂಬಿಸಿದರೆ ಮತ್ತೊಂದು ಹೊರದೇಶಗಳಿಂದ ಒಳಬರುವುದನ್ನು ಪ್ರತಿನಿಧಿಸುತ್ತದೆ. ಈ ಒಳ-ಹೊರ ಹೋಗುವುದನ್ನು ಯಾವುದೇ ವಿಚಾರಕ್ಕೂ ಅಳವಡಿಸಬಹುದು - ಆಮದು/ರಫ್ತು, ಸಂಸ್ಕೃತಿ, ಭಾಷೆ, ತಂತ್ರಜ್ಞಾನ, ವಿನ್ಯಾಸ, ವಿದ್ಯೆ, ಆಚಾರ-ವಿಚಾರ, ಇತ್ಯಾದಿ. ಸರಿ, ನಮಗೇನೋ ಇಂಗ್ಲೀಷರಿಂದ ಸ್ವಾತ್ರಂತ್ರ್ಯ ಸಿಕ್ಕಿತು, ಆದರೆ ಇವತ್ತಿನವರೆಗೂ ಉಳಿದ ದೇಶಗಳಲ್ಲಿ ಇಂಗ್ಲೀಷರ ಸಂತಂತಿ ಅಳಿದುಳಿದ ಹಾಗೆ ಭಾರತದಲ್ಲಿ ಏಕೆ ಮುಂದುವರೆಯಲಿಲ್ಲ ಎನ್ನುವ ಪ್ರಶ್ನೆ ಬರುತ್ತದೆ. ಯಾವಾಗಲೂ ಛಳಿಯೆಂದು ಒದ್ದಾಡುವ ಯುರೋಪಿಯನ್ನರಿಗೆ ಭಾರತದಂತಹ ದೇಶದಲ್ಲಿ ಬೇಕಾದಷ್ಟು ಹವಾಮಾನದ ವೇರಿಯೇಷನ್ನುಗಳಿರುವಂಥ ಪ್ರದೇಶಗಳಿರುವಾಗ ನಮ್ಮಲ್ಲಿ ಎರಡನೇ ಮೂರನೇ ಜನರೇಷನ್ನ್ ಭಾರತೇತರ ಮೂಲದ ಜನರು ಏಕೆ ನೆಲಸದಿದ್ದಿರಬಹುದು? ಅದೇ ಬ್ರಿಟೀಷರಿಂದ ಸ್ವಾತಂತ್ರ್ಯ ಪಡೆದ ಉಳಿದ ದೇಶಗಳಲ್ಲಿ ಹೆಚ್ಚು ಹೆಚ್ಚು ಯುರೋಪ್ ಪ್ರಭಾವವನ್ನು ಇವತ್ತಿನವರೆಗೂ ನಾವು ಕಾಣಬಹುದು. ಏಕೆ ಹೀಗೆ?ಭಾರತದ ನೆಲವನ್ನು ಶತಮಾನಗಳ ಕಾಲ ಆಳಿದ ಯುರೋಪಿಯನ್ನರ ಪ್ರಭಾವ ನಮ್ಮಲ್ಲಿ ಇವತ್ತಿಗೂ ಬಹಳ ದೊಡ್ಡದು. ಒಳ್ಳೆಯದು ಕೆಟ್ಟದ್ದು ಎಂದು ಆಲೋಚಿಸುವುದನ್ನು ಆಬ್ಜೆಕ್ಟಿವ್ ಆಗಿ ಮಾಡಬೇಕಾಗುತ್ತದೆ. ನಮ್ಮಲ್ಲಿ ಹರಿದು ಹಂಚಿ ಹೋಗಿದ್ದ ಪ್ರಾಂತ್ಯಗಳನ್ನು, ಸ್ಥಳೀಯ ರಾಜ ಪರಂಪರೆಗಳನ್ನು ಒಡೆದು-ಒಂದುಗೂಡಿಸಿ ಆಳಿ ಒಂದು ಭಾರತ ದೇಶವಾಯಿತು. ಜೊತೆಗೆ ರೇಲ್ ರೋಡ್, ಅಂಚೆ ವ್ಯವಸ್ಥೆ, ಆಂಗ್ಲ ವಿದ್ಯಾಭ್ಯಾಸ, ವಸ್ತ್ರ ವಿನ್ಯಾಸಗಳು, ಕೇಶ ಶೈಲಿ, ಮತ ಪಂಗಡಗಳು, ಆಹಾರ-ವಿಚಾರಗಳು, ಪಾನೀಯಗಳು, ಹೂವುಗಳು, ತರಕಾರಿಗಳು, ವಿಷಯ-ವಸ್ತುವನ್ನೊಂದನ್ನು ಬೇರೆ-ಬೇರೆ ರೀತಿಯಲ್ಲಿ ನೋಡುವ ದೃಷ್ಟಿಕೋನ... ಹೀಗೆ ಪಟ್ಟಿ ಮುಂದುವರೆಯುತ್ತದೆ. ಇವೆಲ್ಲ ನಮ್ಮನ್ನು ಆಳಿದವರು ನಮಗೆ ನೀಡಿದ ಬಳುವಳಿ. ಇಂತಹ ಬಳುವಳಿಗಳು ಸ್ವಾತಂತ್ರ್ಯೋತ್ತರ ಸಮಾಜದಲ್ಲಿ ತಲೆಮಾರುಗಳು ಮುಂದುವರೆದ ಹಾಗೆ ಅವುಗಳು ಒಂದೊಂದೇ ವಿಶೇಷ ರೂಪಗಳನ್ನು ಪಡೆದುಕೊಳ್ಳತೊಡಗಿದವು. ಯಾವುದು ಸಾವಿರಾರು ವರ್ಷಗಳ ನಮ್ಮ ಇತಿಹಾಸದಲ್ಲಿ ಒಂದು ಭಾಷೆಯಾಗಿ ಯಾವುದು ಉತ್ತರ-ದಕ್ಷಿಣ-ಪೂರ್ವ-ಪಶ್ಚಿಮಗಳಲ್ಲಿ ನಮ್ಮನ್ನು ಒಂದುಗೂಡಿಸಿರಲಿಲ್ಲವೋ ಆ ಕೆಲಸವನ್ನು ಇಂಗ್ಲೀಷ್ ಮಾಡಿತು. ತಲೆ ತಲೆಮಾರುಗಳ ತರುವಾಯ ಯಾವ ವ್ಯವಹಾರ-ವಾಣಿಜ್ಯ ನಮ್ಮಲ್ಲಿ ಉಳಿದು-ಬೆಳೆದುಕೊಂಡು ಬಂದಿತ್ತೋ ಅದರ ಸ್ಥಳದಲ್ಲಿ ಇಂಗ್ಲೀಷ್ ಮೂಲದ ಬಿಸಿನೆಸ್ಸ್ ಪ್ರಾಸೆಸ್ಸುಗಳು ಬಂದವು. ಈ ಜಗತ್ತಿನಲ್ಲಿ ಯಾರು-ಏನು-ಎಲ್ಲೆಲ್ಲಿ-ಹೇಗೆ ಎನ್ನುವ ನಿರ್ಧಾರಗಳು ನಿಲುವುಗಳು ಬದಲುಗೊಂಡವು. ಜಗತ್ತು ಚಿಕ್ಕದಾಯಿತು, ಮನುಷ್ಯ ಪರಂಪರೆಗಳು ಮೊದಲಿಗಿಂತ ಹತ್ತಿರ ಬಂದವು.ನಮ್ಮ ಸಾವಿರಾರು ವರ್ಷಗಳ ಪರಂಪರೆಯ ಮುಂದೆ ಈ ಸ್ವಾತಂತ್ರ್ಯೋತ್ತರ ಆರು ದಶಕಗಳು ಸಂಖ್ಯೆಯಲ್ಲಿ ಬಹಳ ದೊಡ್ಡವೇನು ಅಲ್ಲ, ಆದರೆ ಈ ಆರು ದಶಕಗಳಲ್ಲಿ ಆದ ದೇಶದ ಬೆಳವಣಿಗೆ ಹಾಗೂ ಪ್ರಗತಿ ಗಣನೀಯ. ನಮಗೆ ನಮ್ಮ ಮೂಲಭೂತ ಸಮಸ್ಯೆಗಳು ಎಂದಿಗೂ ಇರುವಂಥವೇ ಎನ್ನಿಸುವಂತಾಗಿದೆ, ನಮ್ಮ ದೇಶದಲ್ಲಿ ನೂರಕ್ಕೆ ಐವತ್ತು ಮಂದಿಗೆ ತಮ್ಮ ಹೆಸರನ್ನು ಬರೆಯಲು ಬಾರದು ಎನ್ನುವುದರಲ್ಲಿ ಬದಲಾವಣೆಯನ್ನು ಕಾಣಲು ಇನ್ನೂ ಬಹಳ ವರ್ಷಗಳೇ ಬೇಕಾಗುತ್ತವೆ, ನಮ್ಮವರಿಗೆಲ್ಲ ಸ್ವಚ್ಛ ಕುಡಿಯುವ ನೀರಿನ ಅಗತ್ಯ ಯಾವತ್ತಿನಿಂದ ಇದ್ದರೂ ಅದನ್ನು ಪೂರೈಸುವುದು ಇನ್ನೂ ಪ್ರಯತ್ನವಾಗಿಯೇ ಉಳಿಯುತ್ತದೆ, ಕೋಟ್ಯಾಂತರ ಜನರು ಕೆಲಸ ಮಾಡಬಲ್ಲವರಾದರೂ, ಕೆಲಸವಿಲ್ಲದವರಾಗುತ್ತಾರೆ. ಜನರಿಂದ ಜನರಿಗಾಗಿ ಬೇಕಾಗುವ ಕೆಲಸ ಹುಟ್ಟಿ ಇಂಡಸ್ಟ್ರಿಗಳು ಬೆಳೆಯದೇ ಹೋಗಿ, ಅಗತ್ಯದ ಕೆಲಸ ಕಾರ್ಯಗಳಲ್ಲಿ ಚಿಕ್ಕ ಮಕ್ಕಳ ಬಳಕೆಯಾಗುತ್ತದೆ. ವೃತ್ತಿ ಶಿಕ್ಷಣ ಸಂಬಂಧಿ ನಿಲುವು ಹೆಚ್ಚಾಗದೇ ಒಂದು ವಿದ್ಯೆ, ಬಿಸಿನೆಸ್ಸನ್ನು ತಮ್ಮದೆನ್ನಿಸಿಕೊಳ್ಳದೇ ಎಲ್ಲರಿಗೂ ಎಲ್ಲವೂ ಗೊತ್ತು ಆದರೆ ಯಾರೂ ಪರಿಣಿತರಿಲ್ಲವೆನ್ನುವಂತಾಗುತ್ತದೆ.ನನ್ನಂಥವರಿಗೆ ಆರು ದಶಕಗಳ ಸ್ವಾತಂತ್ರ್ಯದ ಸವಿಯುಂಡ ಒಂದು ದೇಶದ ಹಿನ್ನೆಲೆಯಿದೆ, ಜೊತೆಗೆ ೨೩ ದಶಕಗಳ ಸ್ವಾತಂತ್ರ್ಯವನ್ನು ಅನುಭವಿಸುತ್ತಿರುವ ಮತ್ತೊಂದು ದೇಶದ ಸದರಿ ಆಗು-ಹೋಗುಗಳ ಅರಿವಿದೆ. ತಂತ್ರಜ್ಞಾನ-ಸಂವಹನ ರಂಗದಲ್ಲಿ ಇತ್ತೀಚೆಗೆ ಕ್ರಾಂತಿಯಾದದ್ದನ್ನು ನಾವು ಕಣ್ಣಾರೆ ಕಂಡು ಅನುಭವಿಸಿದ್ದೇವೆ. ಇನ್ನೂ ಎರಡು ದಶಕಗಳ ಬಳಕೆಯಲ್ಲಿ ಬೆಳೆಯುತ್ತಿರುವ ಸಾಮಾನ್ಯ ಜನರ ಅಂತರ್ಜಾಲದ ಸೂಪರ್ ಹೈವೇ ಹಾಗೂ ನೂರಾರು ವರ್ಷಗಳ ಹಿಂದೆ ಯಾರೋ ತೆರೆದಿಟ್ಟ ದಾರಿಗಳಿರುವಾಗ ಮುಂದೆ ಇವೆಲ್ಲ ಮುಂದೆ ಹೇಗೆ ಎನ್ನುವ ಕುತೂಹಲ ಎಂದಿಗಿಂತಲೂ ಇನ್ನೂ ಬಲವಾಗಬಹುದು.ನಮ್ಮಲ್ಲಿ ಸಮಸ್ಯೆಗಳು ಹೆಚ್ಚು ಎಂದು ಕೈ ಚೆಲ್ಲಿ ಕೂರುವುದರಲ್ಲಿ ಅರ್ಥವಿಲ್ಲ. ನಮ್ಮಲ್ಲಿನ ಹೆಚ್ಚು ಜನಸಂಖ್ಯೆಯೇ ಎಲ್ಲದಕ್ಕೂ ಕಾರಣ ಎಂದು ದೂರಿ ಫಲವಿಲ್ಲ. ಇವೆಲ್ಲ ನಮ್ಮತನದಲ್ಲಿ ಅವಿಭಾಜ್ಯವಾಗಿ ಸೇರಿಹೋಗಿವೆ. ನಮ್ಮ ದೇಶವನ್ನು ಅಮೇರಿಕದಷ್ಟು ಉದ್ದ-ಅಗಲವಾಗಿ ಹಿಗ್ಗಿಸಲಾಗದು. ನಮ್ಮಲ್ಲಿ ಅಮೇರಿಕದ ಸವಲತ್ತು-ಸಂಪನ್ಮೂಲಗಳನ್ನು ಒಂದೇ ದಿನದಲ್ಲಿ ಸೃಷ್ಟಿಸಲಾಗದು. ನಮ್ಮ ಮೂಲಭೂತ ಸಮಸ್ಯೆಗಳನ್ನು ಒಂದೇ ಕ್ಷಣದಲ್ಲಿ ನಿರ್ಮೂಲನ ಮಾಡಲಾಗದು. ಇವುಗಳಿಗೆಲ್ಲ ಉತ್ತರ ಬಹಳ ದೂರದ ಪ್ರಯಾಣ ಹಾಗೂ ಅಂತಹ ಅಪರಿಮಿತ ಪ್ರಯಾಣದಲ್ಲಿ ದೊರಕುವ ಯಶಸ್ಸಿನ ಮೈಲುಗಳು ಈ ಸಮಸ್ಯೆಗಳಿಗೆ ಉತ್ತರಗಳು. ಇನ್ನೂ ನೂರು-ಇನ್ನೂರು ವರ್ಷಗಳಲ್ಲಾದರೂ ನಾವು ಪ್ರಭಲರಾಗುತ್ತೇವೆ. ನಮ್ಮ ಸಂಖ್ಯೆ ನಮ್ಮ ಶಕ್ತಿಯಾಗುತ್ತದೆ. ನಾವು ಎಲ್ಲರಿಗಿಂತ ಮುಂದಿರುತ್ತೇವೆ.ಇವು ಬರೀ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಮಾಡೋ ವಿಷ್ ಆಗಲೀ ವಿಷ್ಫುಲ್ ಆಲೋಚನೆಗಳಾಗಲೀ ಆಗದೇ ಆದಷ್ಟು ಬೇಗ ನಿಜವಾಗುವುದನ್ನು ನಮ್ಮ ತಲೆಮಾರು ನೋಡಿದ್ದರೆ ಎಷ್ಟೊಂದು ಚೆನ್ನಿತ್ತು ಅನ್ನಿಸೋದಿಲ್ಲವೇ?
ಸ್ನೇಹ ..........
ಒಂದೊಮ್ಮೆ ನಾನು ಸತ್ತರೆ,ನನ್ನನ್ನು ಸುಡುವಮೊದಲು ನನ್ನಹೃದಯವನ್ನುಕ್ಷೇಮವಾಗಿ ತೆಗೆದುಕೋ.ನಾನು ನನ್ನ ಹೃದಯದಬಗ್ಗೆ ಯೋಚಿಸುತ್ತಿಲ್ಲಆ ಹೃದಯದೊಳಗಿರುವನಿನ್ನ ಬಗ್ಗೆಯೇಯೋಚಿಸುತ್ತಿದ್ದೇನೆ.ನಿನ್ನ ಹೃದಯದಲ್ಲಿಯಾರೋ ಇರಬಹುದುನಿನ್ನ ಕನಸಿನಲ್ಲಿಯಾರೋ ಇರಬಹುದುನಿನ್ನ ಬದುಕಿನಲ್ಲಿಯಾರೋ ಇರಬಹುದುಆದರೆ . .ನಿನ್ನ ನೆನಪಿನಲ್ಲಿಯಾರೂ ಇಲ್ಲದೇ ಇದ್ದಾಗನಾನಿರುತ್ತೇನೆ...ಸ್ನೇಹಕ್ಕೆ ಬೇಧವಿಲ್ಲ, ಮನಸ್ಸಿಗೆ ರೊಪವಿಲ್ಲ, ಕವನಕ್ಕೆ ಕಣ್ಣಿಲ್ಲ, ನೆನಪಿಗೆ ಶತ್ರುವಿಲ್ಲ, ಕಲ್ಪನೆಗೆ ಲೋಕವಿಲ್ಲ, ಆದರೆ ಯಾರಿಗೆ ಯಾರಿಲ್ಲದಿದ್ದರೊ ನನಗೆ ನಿಮ್ಮ ಸ್ನೇಹವಿದ್ದರೆ ಸಾಕು ಮನಸಿಗೆ ಹಿಡಿದ ಮಂಕು ಮಾಡಿತು ನನ್ನ ಮೂಕ ಮನದ ದಾಸ್ಯದ ಸಂಕೇತ ಈ ಮೂಕ ಹಾಡು ಕೋಗಿಲೆ ಬಾಯಿಗೆ ಕೊಕ್ಕೆಹಾಕಿತು ಈ ಮೂಕ ಕಾರ್ಮುಗಿಲು ತಂದ ಕತ್ತಲೆಯಿಂದ ಆಯಿತು ಬಾಳು ಮೂಕ ಮುಗಿಲು ಕಳೆಯಿತು ಮಳೆಯು ಬಂತು ಆಸೆಯ ಪ್ರತೀಕಮನಸು ತೆರೆದು ಕತ್ತಲ ಕಳೆದು ಹೋಯಿತು ಆ ಪ್ರಕೋಪಹಾಡೊ ಹಂಬಲವಾಯ್ತು ಬೀಗತೆರೆಯಿತು ತೋರಿತು ಪ್ರತಾಪಮಂಕು ಹೋಗಿ ಕರುಳು ಕೂಗಿ ಹೂ ಬಳ್ಳಿ ಕೇಳಿತು ಆಲಾಪ
Saturday, January 30, 2010
ನನ್ನ ಬಗ್ಗೆ ನಿಮಗೆ ಚೂರು ಮಾಹಿತಿ .......
ಸ್ನೇಹಿತರೆ ನಾನು ಸಂತೋಷ. ಮೂಲತಹ ನನ್ನ ಊರು ಬೆಳಗಾವಿ . ನನ್ನ ತಂದೆ ಭಾರತೀಯ ಸೇನೆ ಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿದ್ದರು . ನನ್ನ ತಾಯಿ ದೇವರು ಗ್ರಹಿಣಿ . ನಮ್ಮ ಮನೆಯಲ್ಲಿ ಯಾವಾಗಲು ಮಿಲ್ಟ್ರಿ ಶಿಸ್ತು ಇತ್ತು ಆದರೆ ನಾ ಮಾತ್ರ ಶಿಸ್ತು ಮುರಿದು ನಮ್ಮ ಅಪ್ಪಾಜಿ ಸಿಟ್ಟಿಗೆ ಗುರಿ ಆಗುತ್ತಾ ಇದ್ದೆ .ನಾನು ಹುಟ್ಟಿದ್ದು ಪಂಜಾಬ್ ರಾಜ್ಯದ ಪಠಣಕೋಟ ನಲ್ಲಿ .ನಾನು ಒಂದನೆಯ ತರಗತಿಯಿಂದ ನಾಲ್ಕನೆಯ ತರಗತಿವರೆಗೆ ಓದಿದ್ದು .ಮದ್ಯ ಪ್ರದೇಶ್ ರಾಜ್ಯದ ಭೂಪಾಲ್ ನಲ್ಲಿ. ನಂತರ ನನ್ನ ವಿಧ್ಯಾಭ್ಯಾಸ ಮುಂದು ಒರೆದದ್ದು Ooty Boarding School.ನಾನು ಇಲ್ಲಿ 5 ತರಗತಿಯಿಂದ 10 ತರಗತಿವರೆಗೆ ಓದಿದೆ .ನಾನೇನು ತುಂಬಾ ಜಾಣ ವಿಧ್ಯಾರ್ಥಿ ಆಗಿರಲಿಲ್ಲ . ಒಬ್ಬ ಸಾಧಾರಣ ವಿಧ್ಯಾರ್ಥಿ ಯಾಗಿ ನನ್ನ ಪ್ರಾಥಮಿಕ ಮತ್ತು ಹೈಸ್ಕೂಲ್ ವಿಧ್ಯಾಭ್ಯಾಸ ಮುಗಿಸಿದೆ .ನಮ್ಮ ಅಣ್ಣ ಸುರೇಶ ಮತ್ತು ಅಕ್ಕ ಸುನಂದಾ ನಾನು ಓದುವ ಶಾಲೆಯಲ್ಲಿ ಓದಿದ್ದರು ಅವರೆಲ್ಲ ಇಲ್ಲಿ ಶಾಲೆಗೆ ಫಸ್ಟ್ ಬರುತ್ತಿದ್ದರು (rank) ಅವರು ತುಂಬಾ ಜಾಣ ವಿಧ್ಯಾರ್ಥಿ ಗಳು .ನಾನು ಮಾತ್ರ ದಡ್ಡ ಸಿಕಮಣಿ .ನಂತರ ನಾನು ನನ್ನ ಕಾಲೇಜ್ ವಿಧ್ಯಾಭ್ಯಾಸವನ್ನು ಇಲ್ಲಿಯೇ ಮುಂದುವರಿಸಿದೆ. ನನ್ನ ತಂದೆ ನನಗೆ ಯಾವಾಗಲು ಬೈಯುತ್ತ ಇದ್ದರು ಏಕೆ ಅಂದ್ರೆ ನಾನು ಜಾಣ ವಿಧ್ಯಾರ್ಥಿ ಆಗಿರಲಿಲ್ಲ ಸರಿಯಾಗಿ ಓದುತಿರಲಿಲ್ಲ .ಅವರಿಗೆ ನಂದೇ ಚಿಂತೆ ನನ್ನ ಭವಿಷ್ಯದ ಕುರಿತು .ನನ್ನ ತಂದೆ ಗೆ ಅವರ ಸ್ನೇಹಿತ್ ನನ್ನ ಎದುರು ನನ್ನ ವಿಧ್ಯಭ್ಯಸದ ಕುರಿತು ತುಂಬಾ ಕೇವಲವಾಗಿ ಮಾತನ್ನಾಡಿದ ನಾನು ಅವತ್ತೇ ನಿರ್ಧಾರ ಮಾಡಿದೆ ನಾನು ಚೆನ್ನಾಗಿ ಓದಬೇಕು ಎಂದು .ಅವತ್ತಿನ ನನ್ನ ನಿರ್ಧಾರ ನಾನು ಒಬ್ಬ Rank Student ಆಗಿ ರೂಪ ಗೊಳ್ಳಲು ಕಾರಣ ವಾಯಿತು .ಒಬ್ಬ ಸಾಮಾನ್ಯ ವಿಧ್ಯಾರ್ಥಿ ಯಾಗಿದ್ದ ನಾನು rank ವಿಧ್ಯಾರ್ಥಿ ಯಾಗಿ ನಾನು ರೂಪ ಗೊಂಡೆ .ನಂತರ ನಾನು Engineering ವಿಧ್ಯಾಭ್ಯಾಸ ವನ್ನು IIT Gohuti(Assam) ನಲ್ಲಿ ಮುಗಿಸಿದೆ .ನನ್ನ ಮೇಲೆ ನನ್ನ ತಂದೆ ಇಟ್ಟ ನಂಬಿಕೆ ಯನ್ನು ನಾನು ಉಳಿಸಿದೆ .ನನ್ನ ಅಕ್ಕ ಈಗ INDIAN ARMYನಲ್ಲಿ Captain ಆಗಿ ಸೇವೆಯನ್ನು ಸಲ್ಲಿಸುತ್ತ ಇದ್ದಾಳೆ .ನನ್ನ ಹಿರಿ ಅಣ್ಣ ದೇಶಕ್ಕೆ ಅನ್ನ ನಿಡಿವ ರೈತ .ಇದು ನನ್ನ ಮತ್ತು ನಮ್ಮ ಕುಟುಂಬದ ವಿಷಯ . ನಂಗೆ ಕನ್ನಡ ಓದಲು ಬರೆಯಲು ಕಳಿಸಿದ್ದು ರವಿಕುಮಾರ್ .ಹಾ ಇಲ್ಲಿ ರವಿ ಕುಮಾರ ಬಗ್ಗೆ ಹೇಳದೆ ಇದ್ದರೇ ತಪ್ಪಾಗುತ್ತದೆ . ಈ ರವಿ ನನ್ನ ಪ್ರಾಣ ಸ್ನೇಹಿತ್ ನಾನು ಇವನನ್ನು ಎಷ್ಟು ಗಾಡವಾಗಿ ಪ್ರೀತಿ ಸುತ್ತೇನೆ ಅವನು ನನ್ನ ಅಸ್ಟೇ ದ್ವೆಸುಸುತ್ತಾನೆ .ರವಿ ನಂಗೆ ತುಂಬಾ ಅಂದ್ರೆ ತುಂಬಾ ಸಹಾಯ ಮಾಡಿದ್ದಾನೆ .ತಂದೆಯ ಹಾಗೆ ರಕ್ಷಣೆ ನೀಡಿದ್ದಾನೆ . ತಾಯಿಯ ಹಾಗೆ ನನ್ನ ಪಾಲನೆ ಮಾಡಿದ್ದಾನೆ ಈತನ ಉಪಕಾರ ವನ್ನು ನಾನು ತೀರಿಸಲು ಸಾದ್ಯವಿಲ್ಲ .ನಂಗೆ ಕನ್ನಡ ಬರೆಯಲು ಓದಲು ಕಳಿಸಿದ್ದು ನನ್ನ ಈ ಸ್ನೇಹಿತ ರವಿ
.ನಾನು ಅಂಗ್ಲೇ ಭಾಷೆಯನ್ನೇ ವಟ್ ಗುಡುತ್ತಾ ಇದ್ದೆ ನನ್ನನ್ನು ಕನ್ನದಕರಿಸಿದ್ದು ನನ್ನ ಈ ಸ್ನೇಹಿತ್ ರವಿ . ದೇವಸ್ಥಾನಗಳಿಂದ ದೂರ ಇದ್ದ ನನ್ನನ್ನು ದೇವರ ದೇವಸ್ಥಾನಗಳಿಗೆ ಹೋಗುವಂತೆ ಮಾಡಿದ್ದೂ ಸಹ ರವಿ . ನಾನು ನನ್ನ ಈ ಪ್ರಾಣ ಸ್ನೇಹಿತನಿಂದ ತುಂಬಾ ಅಂದ್ರೆ ತುಂಬಾ ಕಲಿತಿದ್ದೇನೆ ಆದ್ರೆ ನಾ ಮಾತ್ರ ಇತನಿಗಾಗಿ ಒಂದು ಚೂರು ಸಹಾಯವನ್ನು ಮಾಡಲಿಲ್ಲ .ಇತನು ಕೊಟ್ಟ ವಸ್ತು ಗಳನ್ನೂ ನಾನು ಮರಳಿ ಕೊಡಲು ಆಗುತ್ತಾ ಇಲ್ಲ . ನಾನು ಮರಳಿ ಕೊಟ್ಟರೆ ಆ ವಸ್ತುಗಳಿಗೆ ಬೆಲೆ ಕೊಟ್ಟಂಥಹ ದಾಗುತ್ತದೆ ಅದ್ದರಿಂದ ನಾ ಆ ವಸ್ತುಗಳಿಗೆ ಮರಳಿ ಕೊಡುತ್ತ ಇಲ್ಲ .ಆ ವಸ್ತುಗಳಿಗೆ ಬೆಲೆ ಕಟ್ಟಲು ನನ್ನಿಂದ ಸಾದ್ಯವಿಲ್ಲ . ನನ್ನ ಉಸಿರು ಇರುವವರೆಗೆ ಇತನು ಮಾಡಿದ ಸಹಾಯವನ್ನು ಮರಿಯುವದಿಲ್ಲ .ನನ್ನ ಜೀವನದಲ್ಲಿ ನಾನು ಹೆಚ್ಚು ಗೌರವ್ ಕೊಡುವದು ನನ್ನ ಕುಟುಂಬದ ಸದಸ್ಯರಿಗೆ ಮತ್ತು ನನ್ನ ಸ್ನೇಹಿತ ರಾದ ಪ್ರಿನ್ಸ್ ಮತ್ತು ರಶ್ಮಿ ಅಕ್ಕನಿಗೆ ಇವರನ್ನು ನಾನು ತುಂಬಾ ಅಂದ್ರೆ ತುಂಬಾ ಪ್ರೀತಿಸುತ್ತೇನೆ .ಇವರಿಬ್ಬರು ನನ್ನ ಅಪ್ಪ ಅಮ್ಮ ಅಂದ್ರೆ ತಪ್ಪಾಗಲಾರದು . ಇವರು ಮಾಡಿದ ಉಪಕಾರವನ್ನು ನಾನು ಎಂದೆಂದಿಗೂ ಮರೆಯುವದಿಲ್ಲ .ಇವರು ನನ್ನನ್ನು ಇವರು ಹೆತ್ತ ಮಗುವಿನ ಹಾಗೆ ನನ್ನ ಲಾಲನೆ ಪಾಲನೆ ಮಾಡಿದ್ದರೆ .ಇವರಿಬ್ಬರು ನನಗೆ ಪರಿಚಯ ಆಗಿದ್ದು ಇನ್ಫೋಸಿಸ್ ನಲ್ಲಿ . ನಾನು ಇವರ ಟೀಂ ನಲ್ಲಿ ಹೊಸದಾಗಿ ಸೇರಿಕೊಂಡಿದ್ದೆ . ಆಗ ನಮಗೆ ಪ್ರಿನ್ಸ್ ಟೀಂ ಲೀಡರ್ .ಮುಂದೆ ನಾವು ಒಂದೇ ಮನೆಯಲ್ಲಿ ವಾಸ ಮಾಡಿದೆವು . ನಾನು ಆಗ ತುಂಬಾ ಅಂದ್ರೆ ತುಂಬಾ ಮುಗ್ದ ನಂಗೆ ವರ್ಕ್ ನಾಲೆಜ್ ಇತ್ತು ವಿನಃ .ಯಾವರೀತಿ ನಡೆದು ಕೊಳ್ಳಬೇಕು ಅಂತ ಗೊತ್ತು ಇರಲಿಲ್ಲ .ತುಂಬಾ ತುಂಟ ಇದ್ದೆ . ಸರಿಯಾಗಿ ಅಡಿಗೆ ಮಾಡಲು ಬರುವದಾಗಲಿ ಬಟ್ಟೆ ವಾಶ್ ಮಾಡುವದಾಗಲಿ ನಂಗೆ ಬರುತ್ತಿರಲಿಲ್ಲ . ಪ್ರತಿಯೊಂದನ್ನು ನಂಗೆ ಕಳಿಸಿ ಕೊಟ್ಟಂತಹ ಮಾತಾ ಪಿತಾ ಅಂದ್ರೆ ತಪ್ಪಾಗಲಾರದು .ನಾವು ಒಟ್ಟಿಗೆ ಮೂರು ವರ್ಷ ಗಳ ಕಾಲ ಒಟ್ಟಿಗೆ ಇದ್ದೆವು . ಆದ್ರೆ ಈಗ ಬೇರೆ ಬೇರೆ ಆಗಿದ್ದೇವೆ . ಆದರೂ ಸಹ ಅವರನ್ನು ಮರೆಯಲು ಆಗುತ್ತಾ ಇಲ್ಲ . ಮಣ್ಣಿನ ಮುದ್ದೆ ಯಂತೆ ಇದ್ದ ನನ್ನನ್ನು ಒಂದು ಸುಂದರ ಮೂರ್ತಿ ಯನ್ನಾಗಿ ಮಾಡಲು ನನ್ನ ಸ್ನೇಹಿತ ರಾದ ಪ್ರಿನ್ಸ್ ರಶ್ಮಿ ಅಕ್ಕ ಮತ್ತು ರವಿಕಿಮಾರ್ ಹಾಗೂ ನನ್ನ ತಾಯಿ ದೇವರು ,ಅಪ್ಪ ,ಅಕ್ಕ ಸುನಂದಾ ಅಣ್ಣ ಗಣೇಶ್ ಇವರನ್ನು ನಾನು ಪ್ರಾಣ ಕ್ಕಿಂತ ಹೆಚ್ಚು ಪ್ರೀತಿಸುತ್ತೇನೆ ಮತ್ತು ಅರಾದೆಸುತ್ತೇನೆ .
.ನಾನು ಅಂಗ್ಲೇ ಭಾಷೆಯನ್ನೇ ವಟ್ ಗುಡುತ್ತಾ ಇದ್ದೆ ನನ್ನನ್ನು ಕನ್ನದಕರಿಸಿದ್ದು ನನ್ನ ಈ ಸ್ನೇಹಿತ್ ರವಿ . ದೇವಸ್ಥಾನಗಳಿಂದ ದೂರ ಇದ್ದ ನನ್ನನ್ನು ದೇವರ ದೇವಸ್ಥಾನಗಳಿಗೆ ಹೋಗುವಂತೆ ಮಾಡಿದ್ದೂ ಸಹ ರವಿ . ನಾನು ನನ್ನ ಈ ಪ್ರಾಣ ಸ್ನೇಹಿತನಿಂದ ತುಂಬಾ ಅಂದ್ರೆ ತುಂಬಾ ಕಲಿತಿದ್ದೇನೆ ಆದ್ರೆ ನಾ ಮಾತ್ರ ಇತನಿಗಾಗಿ ಒಂದು ಚೂರು ಸಹಾಯವನ್ನು ಮಾಡಲಿಲ್ಲ .ಇತನು ಕೊಟ್ಟ ವಸ್ತು ಗಳನ್ನೂ ನಾನು ಮರಳಿ ಕೊಡಲು ಆಗುತ್ತಾ ಇಲ್ಲ . ನಾನು ಮರಳಿ ಕೊಟ್ಟರೆ ಆ ವಸ್ತುಗಳಿಗೆ ಬೆಲೆ ಕೊಟ್ಟಂಥಹ ದಾಗುತ್ತದೆ ಅದ್ದರಿಂದ ನಾ ಆ ವಸ್ತುಗಳಿಗೆ ಮರಳಿ ಕೊಡುತ್ತ ಇಲ್ಲ .ಆ ವಸ್ತುಗಳಿಗೆ ಬೆಲೆ ಕಟ್ಟಲು ನನ್ನಿಂದ ಸಾದ್ಯವಿಲ್ಲ . ನನ್ನ ಉಸಿರು ಇರುವವರೆಗೆ ಇತನು ಮಾಡಿದ ಸಹಾಯವನ್ನು ಮರಿಯುವದಿಲ್ಲ .ನನ್ನ ಜೀವನದಲ್ಲಿ ನಾನು ಹೆಚ್ಚು ಗೌರವ್ ಕೊಡುವದು ನನ್ನ ಕುಟುಂಬದ ಸದಸ್ಯರಿಗೆ ಮತ್ತು ನನ್ನ ಸ್ನೇಹಿತ ರಾದ ಪ್ರಿನ್ಸ್ ಮತ್ತು ರಶ್ಮಿ ಅಕ್ಕನಿಗೆ ಇವರನ್ನು ನಾನು ತುಂಬಾ ಅಂದ್ರೆ ತುಂಬಾ ಪ್ರೀತಿಸುತ್ತೇನೆ .ಇವರಿಬ್ಬರು ನನ್ನ ಅಪ್ಪ ಅಮ್ಮ ಅಂದ್ರೆ ತಪ್ಪಾಗಲಾರದು . ಇವರು ಮಾಡಿದ ಉಪಕಾರವನ್ನು ನಾನು ಎಂದೆಂದಿಗೂ ಮರೆಯುವದಿಲ್ಲ .ಇವರು ನನ್ನನ್ನು ಇವರು ಹೆತ್ತ ಮಗುವಿನ ಹಾಗೆ ನನ್ನ ಲಾಲನೆ ಪಾಲನೆ ಮಾಡಿದ್ದರೆ .ಇವರಿಬ್ಬರು ನನಗೆ ಪರಿಚಯ ಆಗಿದ್ದು ಇನ್ಫೋಸಿಸ್ ನಲ್ಲಿ . ನಾನು ಇವರ ಟೀಂ ನಲ್ಲಿ ಹೊಸದಾಗಿ ಸೇರಿಕೊಂಡಿದ್ದೆ . ಆಗ ನಮಗೆ ಪ್ರಿನ್ಸ್ ಟೀಂ ಲೀಡರ್ .ಮುಂದೆ ನಾವು ಒಂದೇ ಮನೆಯಲ್ಲಿ ವಾಸ ಮಾಡಿದೆವು . ನಾನು ಆಗ ತುಂಬಾ ಅಂದ್ರೆ ತುಂಬಾ ಮುಗ್ದ ನಂಗೆ ವರ್ಕ್ ನಾಲೆಜ್ ಇತ್ತು ವಿನಃ .ಯಾವರೀತಿ ನಡೆದು ಕೊಳ್ಳಬೇಕು ಅಂತ ಗೊತ್ತು ಇರಲಿಲ್ಲ .ತುಂಬಾ ತುಂಟ ಇದ್ದೆ . ಸರಿಯಾಗಿ ಅಡಿಗೆ ಮಾಡಲು ಬರುವದಾಗಲಿ ಬಟ್ಟೆ ವಾಶ್ ಮಾಡುವದಾಗಲಿ ನಂಗೆ ಬರುತ್ತಿರಲಿಲ್ಲ . ಪ್ರತಿಯೊಂದನ್ನು ನಂಗೆ ಕಳಿಸಿ ಕೊಟ್ಟಂತಹ ಮಾತಾ ಪಿತಾ ಅಂದ್ರೆ ತಪ್ಪಾಗಲಾರದು .ನಾವು ಒಟ್ಟಿಗೆ ಮೂರು ವರ್ಷ ಗಳ ಕಾಲ ಒಟ್ಟಿಗೆ ಇದ್ದೆವು . ಆದ್ರೆ ಈಗ ಬೇರೆ ಬೇರೆ ಆಗಿದ್ದೇವೆ . ಆದರೂ ಸಹ ಅವರನ್ನು ಮರೆಯಲು ಆಗುತ್ತಾ ಇಲ್ಲ . ಮಣ್ಣಿನ ಮುದ್ದೆ ಯಂತೆ ಇದ್ದ ನನ್ನನ್ನು ಒಂದು ಸುಂದರ ಮೂರ್ತಿ ಯನ್ನಾಗಿ ಮಾಡಲು ನನ್ನ ಸ್ನೇಹಿತ ರಾದ ಪ್ರಿನ್ಸ್ ರಶ್ಮಿ ಅಕ್ಕ ಮತ್ತು ರವಿಕಿಮಾರ್ ಹಾಗೂ ನನ್ನ ತಾಯಿ ದೇವರು ,ಅಪ್ಪ ,ಅಕ್ಕ ಸುನಂದಾ ಅಣ್ಣ ಗಣೇಶ್ ಇವರನ್ನು ನಾನು ಪ್ರಾಣ ಕ್ಕಿಂತ ಹೆಚ್ಚು ಪ್ರೀತಿಸುತ್ತೇನೆ ಮತ್ತು ಅರಾದೆಸುತ್ತೇನೆ .
ನಿಮ್ಮನ್ನು ನೀವು ಮೆಚ್ಚಿಸುವ ವಿಧಾನ ಭಾಗ ಒಂದು
ಎರಡು ಅಂಶಗಳನ್ನು ಮೊದಲೇ ಹೇಳಿ ಬಿಟ್ಟರೆ ಒಳ್ಳೆಯದು: ೧) ನೀವು ಏನು ಮಾಡುತ್ತೀರಿ, ಬಿಡುತ್ತೀರಿ ಎನ್ನುವುದು ನಿಮಗೇ ಬಿಟ್ಟದ್ದು, ನಿಮ್ಮ ಬಗ್ಗೆ ಯೋಚಿಸಲು ಉಳಿದವರಿಗೆ ಪುರುಸ್ತೊತ್ತಿಲ್ಲ; ೨) ನೀವು ಏನನ್ನು ತೊಟ್ಟುಕೊಂಡಿದ್ದೀರಿ, ಹೇಗೆ ಮಾತನಾಡುತ್ತೀರಿ, ನಿಮ್ಮನ್ನು ನೀವು ಹೇಗೆ ತೋರಿಸಿಕೊಳ್ಳುತ್ತೀರಿ ಎನ್ನುವುದರ ಮೇಲೆ ಬೇಕಾದಷ್ಟು ನಿರ್ಧಾರಿತವಾಗುತ್ತದೆ.ಮೇಲಿನ ಹೇಳಿಕೆಗಳಲ್ಲಿ ೧) ಮತ್ತು ೨) ಒಂದಕ್ಕೊಂದು contradictory ಆಗಿ ಕಾಣುತ್ತಿವೆಯೇ? ಹಾಗೆ ಕಾಣಲಿ ಎಂಬುದೇ ನನ್ನ ಉದ್ದೇಶ!ನಾನು ಅಮೇರಿಕೆಗೆ ಬಂದ ಹೊಸತರಲ್ಲಿ ನನ್ನ ಸಹೋದ್ಯೋಗಿ ಕೆನ್ ಲೆನರ್ಡ್ (Ken Leonard) ನನಗೆ ಸಾಕಷ್ಟು ವಿಷಯಗಳಲ್ಲಿ ಮಾರ್ಗದರ್ಶಿಯಾಗಿದ್ದ. ಅವನೇನೂ ನನಗೆ ಕಲಿಸಬೇಕು ಎಂದು ಕಲಿಸುತ್ತಿರಲಿಲ್ಲ, ಅವನು ಹೇಳುವ ವಿಷಯಗಳಲ್ಲಿ ನನಗೆ ಸಾಕಷ್ಟು ಕ್ಲೂ ಸಿಗುತ್ತಿದ್ದವು. ಒಂದು ದಿನ ಮುಂಜಾನೆ ಕಾಫಿ ಕುಡಿಯಲು ಹೋಗುತ್ತಿರುವಾಗ ಮಧ್ಯೆ ನಮ್ಮ ಆಫೀಸಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಒಬ್ಬರ ಪರಿಚಯವನ್ನು ಕೆನ್ ಮಾಡಿಕೊಟ್ಟ - ಹೊಸದಾಗಿ ಅಂದರೆ ಒಂದು ವರ್ಷದ ಒಳಗೆ. 'ನಾವೆಲ್ಲರೂ ಬಿಸಿನೆಸ್ ಕ್ಯಾಷುವಲ್ ದಿರಿಸಿನಲ್ಲಿದ್ದರೆ ಆ ಮನುಷ್ಯ ಯಾವಾಗಲೂ ಸೂಟ್ ತೊಟ್ಟಿರುತ್ತಾನೆ, ಅವನು ಏನು ಮಾಡುತ್ತಾನೋ ಬಿಡುತ್ತಾನೋ ನನಗಂತೂ ಗೊತ್ತಿಲ್ಲ, ಆದರೆ ಅವನು ಬಂದಂದಿನಿಂದ ಮ್ಯಾನೇಜ್ಮೆಂಟ್ ಕ್ಯಾಡರ್ ನಲ್ಲಿ ಮೇಲೇರುತ್ತಲೇ ಇದ್ದಾನೆ' ಎಂದು ನಂತರ ಹೇಳಿದ, ನನಗೇನೂ ಅನ್ನಿಸಲಿಲ್ಲ, ನಾನು ಆ ಮಾತನ್ನು ಒಂದು ಕಿವಿಯಲ್ಲಿ ಕೇಳಿ ಮತ್ತೊಂದು ಕಿವಿಯಲ್ಲಿ ಬಿಟ್ಟೆ.ಆದರೆ ಅಂದಿನಿಂದ ಯಾರು ಯಾರು ಏನನ್ನು ತೊಡುತ್ತಾರೆ, ಹೇಗೆ ವ್ಯವಹರಿಸುತ್ತಾರೆ ಎನ್ನುವುದನ್ನೆಲ್ಲ ಸೂಕ್ಷ್ಮವಾಗಿ ಗಮನಿಸತೊಡಗಿದೆ. ಮುಂದೆ ಕೆನ್ ಕೆಲಸವನ್ನು ಬಿಟ್ಟು ಮತ್ತೆಲ್ಲೋ ಹೋದ, ನಾನೂ ಆ ಕಂಪನಿಯನ್ನು ಬಿಟ್ಟು ಬೇರೊಂದನ್ನು ಸೇರಿಕೊಂಡೆ.ಈಗ ಸ್ವಲ್ಪ ಕಾಲ ಹಿಂದೆ ಹೋಗೋಣ - ನಾವೆಲ್ಲರೂ ಹೈಸ್ಕೂಲು ಮುಗಿಸಿ ಕಾಲೇಜು ಸೇರಿದಾಗ, ಪಿಯುಸಿ ಮುಗಿಸಿ ಡಿಗ್ರಿ ಸೇರಿಕೊಂಡಾಗ, ಮುಂದೆ ಕೆಲಸಕ್ಕೆ ಸೇರಿಕೊಂಡಾಗ ನಮ್ಮಲ್ಲೆಲ್ಲಾ ಆದ ಬದಲಾವಣೆಗಳನ್ನು ನಾವು ಗುರುತಿಸಿಕೊಂಡಿದ್ದೇವೆಯೇ? ನಾವು ಹಲ್ಲುಜ್ಜುವುದನ್ನು ಹೇಗೆ ಕಲಿತುಕೊಂಡೆವೋ, ಶೇವ್ ಮಾಡುವುದನ್ನು ಯಾರಿಂದ ಕಲಿತೆವೋ, ಮುಖಕ್ಕೆ ಮೇಕಪ್ ತೀಡುವುದನ್ನು ಎಲ್ಲಿಂದ ಶುರು ಮಾಡಿದೆವೋ ಎಂದೆಲ್ಲಾ ತಿರುಗಿ ನೋಡುತ್ತಾ ಹೋದಾಗ ನಾವು ಆಫೀಸಿಗೆ ಯಾವ ರೀತಿಯ ಬಟ್ಟೆಗಳನ್ನು ತೊಡುತ್ತೇವೆ, ಸಂದರ್ಶನಗಳಿಗೆ ಯಾವ ರೀತಿಯ ಬಟ್ಟೆಯನ್ನು ತೊಡಬೇಕು ಎನ್ನುವುದನ್ನೆಲ್ಲ ಹೇಗೆ ಕಲಿತೆವು, ಯಾರು ಹೇಳಿಕೊಟ್ಟರು ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸಿ, ಅಗತ್ಯವಿದ್ದಲ್ಲಿ ಧನಾತ್ಮಕ ಬದಲಾವಣೆಗಳನ್ನು ಮಾಡಿ ನಾವು ನಮ್ಮನ್ನು ಹೆಚ್ಚಿನ ಮಟ್ಟದಲ್ಲಿ marketing ಮಾಡಿಕೊಳ್ಳುವುದೇ ಈ ಬರಹದ ಉದ್ದೇಶ. ನಾವು ಅನುಸರಿಸುವ ರೀತಿ-ನೀತಿಗಳು ನಮಗೆ ಅಭ್ಯಾಸವಾಗಿ ಹೋಗಿವೆ, ಅವು ನಮ್ಮ ಸ್ವಭಾವದ ಒಂದು ಭಾಗವಾಗಿ ಹೋಗಿರೋದರಿಂದ ಬದಲಾವಣೆಯೇನಾದರೂ ಮಾಡಬೇಕಾಗಿ ಬಂದರೆ ಅಂತಹ ಬದಲಾವಣೆಗಳು ಸಾಕಷ್ಟು ಪ್ರತಿರೋಧವನ್ನು ಎದುರಿಸಬೇಕಾಗಿ ಬರುತ್ತದೆ.ಈಗ ನಾವು ತೊಡುವ ಶೂಸ್ ನಿಂದ ಆರಂಭಿಸೋಣ - ಗಂಡಸರಿಗೆ ಇವು ಕೆಲವು ಕೆಲವು ಬಣ್ಣಗಳಲ್ಲಿ ಮಾತ್ರ ಲಭ್ಯ, ಕಪ್ಪು, ಕಂದು (tan), ತಿಳಿ ಹಳದಿ, ಇನ್ನೇನೇ ಬಣ್ಣಗಳಿದ್ದರೂ - ಅವುಗಳನ್ನೆಲ್ಲ ನ್ಯೂಟ್ರಲ್ ಗುಂಪಿಗೆ ಸೇರಿಸೋಣ (ಶೂ ಪಾಲಿಷ್ ಸಿಗುವುದು ಹಾಗೆ ಮಾತ್ರ ತಾನೆ), ಅದೇ ಹೆಂಗಸರಿಗಾದರೆ ಇನ್ನೊಂದಿಷ್ಟು ಬಣ್ಣಗಳನ್ನು ಸೇರಿಸಬಹುದು, ಆದರೆ ಅವರು ಶೂ ಪಾಲಿಷ್ ಮಾಡುತ್ತಾರಾ ಬಿಡುತ್ತಾರಾ ಅನ್ನೋದನ್ನು ಅವರಿಗೇ ಬಿಡೋಣ.ರೂಲ್ ನಂಬರ್ ೧: ಬಿಸಿನೆಸ್ ಕ್ಯಾಷುಯಲ್, ಅಥವಾ ಡ್ರೆಸ್ (ಫಾರ್ಮಲ್) ವೇರ್ನ ಇತಿಮಿತಿಯಲ್ಲಿ - ನಿಮ್ಮ ಶೂಸ್ ಬಣ್ಣ ಹಾಗೂ ನೀವು ತೊಡುವ ಬೆಲ್ಟ್ ಬಣ್ಣ ಒಂದೇ ಆಗಿರಬೇಕು.ರೂಲ್ ನಂಬರ್ ೨: ನೀವು ಧರಿಸುವ ಫ್ಯಾಂಟ್ ಬಣ್ಣ ಹಾಗೂ ನೀವು ಧರಿಸುವ ಸಾಕ್ಸ್ ಬಣ್ಣ ಎರಡೂ ಮ್ಯಾಚ್ ಆಗಬೇಕು.ಇವೆರಡೂ ಬಹಳ ಸರಳವಾದ ರೂಲ್ ಅನ್ನಿಸಬಹುದು, ಇಂದಿನಿಂದ ನೀವೇ ನೋಡುತ್ತಾ ಹೋಗಿ ಎಷ್ಟು ಜನರು ಇದನ್ನು ಫಾಲೋ ಮಾಡುತ್ತಾರೆ ಎಂದು. ಈ ರೂಲ್ಗಳನ್ನು ನಾನು ಸೃಷ್ಟಿಸಿಲ್ಲ, ಬಹಳಷ್ಟು ಜನರು ಬಳಸಬಹುದಾದ ರೀತಿ-ನೀತಿ ನನ್ನ ಕಣ್ಣಿಗೆ ಹಾಗೆ ಕಂಡುಬಂದಿದೆ, ಅಷ್ಟೇ.ರೂಲ್ ನಂಬರ್ ೩: ನೀವು ಇಸ್ತ್ರಿ ಹಾಕಿಸದ ಬಟ್ಟೆಯನ್ನು ಆಫೀಸಿಗಾಗಲೀ, ಸಂದರ್ಶನಕ್ಕಾಗಲೀ ತೊಡಲೇಬೇಡಿ. ನಿಮಗೆ ನಿಮ್ಮ ಬಟ್ಟೆಗಳನ್ನು ಒಗೆದು, ಇಸ್ತ್ರಿ ಹಾಕಿಸಲು ಸಮಯವಿಲ್ಲದಿದ್ದರೆ ಸ್ವಲ್ಪ ಕಾಸು ಬಿಚ್ಚಿ.ಡಾರ್ಕ್ ಬಣ್ಣದ ಪ್ಯಾಂಟು ಅಥವಾ ಸೂಟಿಗೆ ಲೈಟ್ ಬಣ್ಣದ ಶರ್ಟ್ ಹಾಕಬೇಕು ಎಂದೇನೂ ನಿಯಮವಿಲ್ಲ, ನಿಮ್ಮ ಚರ್ಮದ ಬಣ್ಣಕ್ಕೆ ಅನುಗುಣವಾಗಿ, ನಿಮಗೆ ಇಷ್ಟವಾಗುವ ಯಾವ ಬಣ್ಣದ ಶರ್ಟನ್ನಾದರೂ ಧರಿಸಿ, ಆದರೆ ಹೊಸ ಹೊಸ ಪ್ರಯೋಗಗಳನ್ನು ಇಂಟರ್ವ್ಯೂ ದಿನ ಮಾಡದೇ ಅದನ್ನೆಲ್ಲ ಇನ್ಯಾವುದೋ ಒಂದು ದಿನ ಇಟ್ಟುಕೊಳ್ಳಿ.ರೂಲ್ ನಂಬರ್ ೪: ನೀವು ತೊಡುವ ಟೈ ಬಣ್ಣ ನಿಮ್ಮ ಸೂಟು ಹಾಗು ಶರ್ಟ್ ಎರಡಕ್ಕೂ ಹೊಂದುವಂತಿರಲಿ, ಅಲ್ಲದೇ ಟೈ ಉದ್ದ ಪ್ಯಾಂಟಿನ ಬಕಲ್ನ ಕೆಳಭಾಗಕ್ಕೆ ಬರುವಂತಿರಲಿ.ಥರಾವರಿ ಸೂಟುಗಳು, ಅವುಗಳ ವಿಧದಲ್ಲಿ ಯಾವುದನ್ನು ತೊಡುವುದು, ಬಿಡುವುದು ಎನ್ನುವ ಸಂದೇಹವಿದ್ದರೆ ಸಿಂಗಲ್ ಬ್ರೆಸ್ಟೆಡ್ ಅಥವಾ ಡಬಲ್ ಬ್ರೆಸ್ಟೆಡ್ ಸೂಟು ಯಾವುದಾದರೂ ಆದೀತು. ಆದರೆ ಡಬಲ್ ಬ್ರೆಸ್ಟೆಡ್ ಸೂಟ್ ಇದ್ದರೆ ಅದಕ್ಕೆ ತಕ್ಕಂತೆ ಧರಿಸುವ ಶರ್ಟ್ ಕಾಲರ್ ತುದಿಯಲ್ಲಿ ಬಟನ್ ಇಲ್ಲದಿರಲಿ.ಇನ್ನು ಪ್ಯಾಂಟಿನ ವಿಷಯಕ್ಕೆ ಬಂದರೆ - ಅದರ ಉದ್ದ ನೀವು ಶೂಸ್ ಧರಿಸಿದ ಮೇಲೆ ನಿಮ್ಮ ಎತ್ತರಕ್ಕೆ ತಕ್ಕನಾಗಿರಲಿ, ಮೇಲಿಂದ ಕೆಳಗೆ ಎಲ್ಲೂ ಬ್ರೇಕ್ ಆಗದೆ ಪ್ಯಾಂಟಿನ ಹೆಮ್ ಶೂಸ್ ಮುಟ್ಟುವಲ್ಲಿ ಒಂದು ಮಡಿಕೆ ಬಿದ್ದರೆ ಸಾಕು. ನಿಮ್ಮ ಪ್ಯಾಂಟಿನಲ್ಲಿ ನೆರಿಗೆ (pleat) ಇದ್ದರೆ ಕೆಳಗೆ ಹೆಮ್ ಹಾಕುವಲ್ಲಿ ಫೋಲ್ಡ್ ಮಾಡಿ ಹೊಲಿದಿದ್ದರೆ ಚೆನ್ನಾಗಿರುತ್ತೆ, ಇಲ್ಲವೆಂದರೂ ಪರವಾಗಿಲ್ಲ.ಇನ್ನು ಕೊನೆಯದಾಗಿ, ಅದು ಶುಕ್ರವಾರವಿರಲಿ, ಶನಿವಾರವಿರಲಿ ಆಫೀಸಿನ ಕೆಲಸದಲ್ಲಿರುವಾಗ ಜೀನ್ಸ್ ಹಾಗೂ ಸ್ನೀಕರ್ಸ್ ಅನ್ನು ತೊಡಲೇಬೇಡಿ - ಬುಸಿನೆಸ್ ಕ್ಯಾಷುವಲ್ ಬಟ್ಟೆಗಳಲ್ಲಿ ಜೀನ್ಸ್ ಬರುತ್ತೋ ಇಲ್ಲವೋ ಗೊತ್ತಿಲ್ಲ, ಆದರೆ ನಾನು ಅಲ್ಲಿ-ಇಲ್ಲಿ ಓದಿದಂತೆ ಜೀನ್ಸ್ ತೊಡುವುದನ್ನು ಯಾರೂ ರೆಕಮಂಡ್ ಮಾಡಿದ ಹಾಗಿಲ್ಲ.ಇನ್ನು ಮುಂದಿನವಾರಗಳಲ್ಲಿ ಡ್ರೆಸ್ ಮಾಡುವುದರ ಬಗ್ಗೆ ಮುಂದುವರಿಸುತ್ತೇನೆ, ಜೊತೆಯಲ್ಲಿ ವಾಸನೆಯ ಬಗ್ಗೆಯೂ ಚರ್ಚಿಸೋಣ.
ನಿಮ್ಮ ಬಗ್ಗೆ ಹೇಳುವದಕ್ಕೆ ಸಂಕೋಚವೇಕೆ .............?
ಈ ಸರಣಿಯಲ್ಲಿ ಇನ್ನೂ ಹಲವಾರು ವಿಷಯಗಳು ಬರೋದರಲ್ಲಿವೆ - ಅವುಗಳಲ್ಲಿ ಮುಖ್ಯವಾದವುಗಳು: Tell me about yourself, Resume, Cover letter, Thank you letter, Why should I hire you? How much money are you looking for? ಇತ್ಯಾದಿ...ಇವುಗಳಲ್ಲಿ ಒಂದೊಂದಾಗೇ ನೋಡಿಕೊಂಡು ಬರೋಣ.೩) Tell me about yourself!ನಿಮ್ಮ ಬಗ್ಗೇನೇ ಹೇಳಿಕೊಳ್ಳೋದಕ್ಕೆ ಸಂಕೋಚವೇಕೆ, ಅದಕ್ಕೂ ತಯಾರಿ ಅನ್ನೋದು ಬೇಕೆ ಎಂದರೆ ಹೌದು ಎನ್ನುತ್ತೇನೆ. ಸಂಕೋಚ ಎಲ್ಲರಿಗೂ ಇರಲಾರದು ಆದರೆ ಎಷ್ಟೋ ಬಾರಿ ಈ ಪ್ರಶ್ನೆಯ ಉತ್ತರವೇ ನಿಮ್ಮ ಸಂದರ್ಶನವನ್ನು make or break ಮಾಡಬಲ್ಲದು. ಆದ್ದರಿಂದ ನೀವು ಗಂಭೀರವಾಗಿ ಯಾವುದಾದರೂ ಸಂದರ್ಶನಕ್ಕೆ ತಯಾರಾಗುತ್ತಿದ್ದರೆ ಕೊನೇ ಪಕ್ಷ ಏನಿಲ್ಲವೆಂದರೂ ಈ ಪ್ರಶ್ನೆಯ ಉತ್ತರಕ್ಕಾದರೂ ತಯಾರಾಗಿ. ಎಷ್ಟೋ ಸಾರಿ icebreaker ಆಗಿ ಈ ರೀತಿಯ ಪ್ರಶ್ನೆಗಳನ್ನು ಕೇಳಿದರೂ, ಈ ಪ್ರಶ್ನೆಯನ್ನು ಕೇಳಿದ ಸಂದರ್ಶಕ ಏನನ್ನು ನಿರೀಕ್ಷಿಸುತ್ತಾನೆ/ಳೆ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡರೆ ಎಲ್ಲವೂ ಸುಲಭವಾದೀತು.ನಿಮ್ಮ ಸಂದರ್ಶನ ಒಂದೇ ಫೋನ್ ಮುಖಾಂತರ ನಡೆಯುತ್ತಿರಬಹುದು ಅಥವಾ ಮುಖಾಮುಖಿ ಇದ್ದಿರಬಹುದು, ಆದರೂ ಸಹ ನಾನು ನಡೆಸಿದ, ನಾನು ಸಂದರ್ಶಕನಾಗಿ ಹೋದ ಎಷ್ಟೋ ಸಂದರ್ಶನಗಳಲ್ಲಿ ಈ ಪ್ರಶ್ನೆಯನ್ನೆ ಮೊಟ್ಟಮೊದಲ ಪ್ರಶೆಯನ್ನಾಗಿ ಕೇಳಿದ್ದಿದೆ, ಹೀಗೆ ಇನ್ನು ಮುಂದೆ ಕೇಳುತ್ತಾರೆ ಎನ್ನುವ ನನ್ನ ನಂಬಿಕೆಯಿಂದಲೇ ನಾನು ಈ ಪ್ರಶ್ನೆಯ ಉತ್ತರ ಅತಿಮುಖ್ಯ ಎಂದು ಮೊದಲೇ ಹೇಳಿಬಿಡುತ್ತೇನೆ. ಜೊತೆಯಲ್ಲಿ ಈ ಪ್ರಶ್ನೆಗೆ ಉತ್ತರ ಸುಲಭವೆಂದು ನೀವೆಂದುಕೊಂಡಿರಬಹುದು, ಆದರೂ ಹೊಸ ಸ್ಥಳ, ಅಪರಿಚಿತರ ನಡುವೆ ನಿಮ್ಮ-ನಿಮ್ಮ ಪರಿಚಯವನ್ನು ಹೇಳಿಕೊಳ್ಳುವಲ್ಲಿ ತೊಂದರೆ ಏನಾದರೂ ಇದ್ದೀತೆಂದು ನಿಮಗನ್ನಿಸಿದರೆ ನೀವು ಈ ಪ್ರಶ್ನೆಯ ಉತ್ತರವನ್ನು ಗಂಭೀರವಾಗಿ ತೆಗೆದುಕೊಳ್ಳಲೇ ಬೇಕು. ಅಲ್ಲದೇ ಅವರು ಪ್ರಶ್ನೆ ಕೇಳಿದ ನಂತರ ಅದಕ್ಕೊಂದು ಉತ್ತರ ಸಿದ್ಧ ಪಡಿಸುವುದಕ್ಕಿಂತ ಮೊದಲೇ ಉತ್ತರವನ್ನು ಸಿದ್ಧಪಡಿಸಿಕೊಂಡು ಮನದಟ್ಟು ಮಾಡಿಕೊಂಡಿರುವುದು ಒಳ್ಳೆಯದು.ನಿಮಗೆ Tell me about yourself... ಎಂದು ಪ್ರಶ್ನೆ ಕೇಳಿದವರ ಮನಸ್ಸಿನಲ್ಲಿ ಏನಿದ್ದಿರಬಹುದು! ಅವರು ನಿಜವಾಗಿಯೂ ನಿಮ್ಮ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದಾರೋ ಅಥವಾ ನಿಮ್ಮ ಮಾತುಕಥೆಗಳು (communication skills) ಹೇಗಿವೆ ಎಂದು ಕಂಡುಕೊಳ್ಳುತ್ತಿದ್ದಾರೋ ಅಥವಾ ಈ ಎರಡೂ ಇದ್ದಿರಬಹುದು, ಮತ್ತೇನೋ ಇದ್ದಿರಬಹುದು. ಆದರೂ ಎಲ್ಲರಿಗೂ ಅನ್ವಯವಾಗುವಂತಹ ಒಂದು standard ಉತ್ತರವನ್ನು ತಯಾರಿ ಮಾಡಿಕೊಳ್ಳುವುದು ಒಳ್ಳೆಯದು.ಈ ಪ್ರಶ್ನೆಗೆ ಉತ್ತರವಾಗಿ, ಈ ಪ್ರಶ್ನೆಗಳನ್ನು ಕೇಳಿದವರಿಗೆ ನಿಮ್ಮ ಹೆಸರು ಈಗಾಗಲೇ ಗೊತ್ತಿದ್ದರೆ ಮತ್ತೆ ಅದನ್ನೇ ಹೇಳಬೇಡಿ ಇಲ್ಲವಾದರೆ, ಸೂಚ್ಯವಾಗಿ ಹೇಳಿ. (What is your name? ಎಂದು ಯಾರಾದರೂ ಕೇಳಿದಾಗ ಕೆ.ಜಿ. ಮಕ್ಕಳು ಹೇಳಿದಂತೆ My name is...ಎಂದು ಉಲಿಯಬೇಡಿ, ಅದರ ಬದಲಿಗೆ ಗಂಭೀರವಾಗಿ I am XYZ ಎಂದು ಮಾತ್ರ ಹೇಳಿ! ಕನ್ನಡದಲ್ಲಿ ಯಾರಾದರೂ ನಿಮ್ಮ ಹೆಸರೇನು ಎಂದರೆ ನೀವು ಅದಕ್ಕುತ್ತರವಾಗಿ 'ನನ್ನ ಹೆಸರು ...' ಎಂದೇನೂ ಹೇಳುವುದಿಲ್ಲ ತಾನೆ?!)Tell me about yourself ನಲ್ಲಿ ಮುಖ್ಯವಾಗಿ ಹೇಳಬೇಕಾದವುಗಳು:ನಿಮ್ಮ Profession, ಅಥವಾ level (ಉದಾಹರಣೆಗೆ - I am senior software engineer, I am manager of ...systems)a) Expertise - ನಿಮ್ಮ functions / capabalitiesb) Strengths include... - unique professional qualitiesc) Worked with/for ... - type of organizations / industries /groups (depends on the scope of the interview)ಇವುಗಳ ಸಹಾಯದಲ್ಲಿ ನೀವು ಏನನ್ನು ಮಾಡಿದ್ದೀರಿ ಎಂಬುದನ್ನು ಹೇಳಿ. ಅಕಸ್ಮಾತ್ ನಿಮಗೇನಾದರೂ ಇದು ಹೊಸ ಕೆಲಸವಾದರೆ, (ಅನುಭವ ಇದ್ದೂ ಬೇರೆ ಇಂಡಸ್ಟ್ರಿಗೆ ಹೋದರೆ) ಏನೇನು ಮಾಡಬಲ್ಲಿರಿ ಎಂಬುದನ್ನು ಹೇಳಬಹುದು.ಈ ಹಿನ್ನೆಲೆಯಲ್ಲಿ Tell me about yourself ಗೆ ಉತ್ತರವಾಗಿ: I am so and so...(ಹೆಸರು ಆಪ್ಷನಲ್ ಅಥವಾ ಅಗತ್ಯಕ್ಕೆ ತಕ್ಕಂತೆ), for the last X years I am working as a ((your designation)) in ((company/group name))(if it is a same company interview in a different group, then mention group name).Then include your expertiese - what you have done -ಉದಾಹರಣೆಗೆ:Designe(d) databases, systemsResolve(d) system issuesEnhance(d) performance of the systemsManage(d) a team of N number of individualsOversea/saw a part of the project in XYZ appplication ಇತ್ಯಾದಿ...ನಂತರ ನಿಮ್ಮ Unique functions/capabilities ಹೇಳಿ - ಇದನ್ನು ಹೇಳುವಾಗ ನೀವು ಅರ್ಜಿ ಗುಜರಾಯಿಸಿದ ಕೆಲಸವನ್ನು ಮನಸ್ಸಿನಲ್ಲಿಟ್ಟುಕೊಂಡು ಅದಕ್ಕೆ ತಕ್ಕಂತೆ ಹೇಳಿ.ನಂತರ ಎಲ್ಲೆಲ್ಲಿ ಕೆಲಸ ಮಾಡಿದ್ದೀರಿ, ಎಂಬುದನ್ನು ಸ್ಯೂಚ್ಯವಾಗಿ ಹೇಳಿ.ಈ ಪ್ರಶ್ನೆಗೆ ಉತ್ತರ ಸುಮಾರು ೨-೩ ನಿಮಿಷ ಹಿಡಿಯಬಹುದು, ಸಮಯವನ್ನು ನೀವೇ ಅಂದಾಜು ಮಾಡಬೇಕು, ನಿಮ್ಮ ಹಾಗೂ ಸಂದರ್ಶನ ನಡೆಸುವವರ ಅನುಕೂಲಕ್ಕೆ ತಕ್ಕಂತೆ. ಈ ಪ್ರಶ್ನೆಗೆ ಉತ್ತರವನ್ನು ಹೇಳುವಾಗ ನೀವು ನಿಮ್ಮ confidence level ನ ಉತ್ತುಂಗ ಸ್ಥಿತಿಯಲ್ಲಿರಬೇಕು. ಈ ಪ್ರಶ್ನೆಗೆ ಪೂರ್ವ ನಿರ್ಧಾರಿತ, ಅಥವಾ ಈಗಾಗಲೇ ಸಿದ್ಧಪಡಿಸಿದ ಉತ್ತರವನ್ನು ಶಾಲೆಯ ಮಕ್ಕಳು ಒಪ್ಪಿಸಿದ ಹಾಗೆ ಕೇಳುವವರ ಕಣ್ಣಿನಲ್ಲಿ ಕಣ್ಣನ್ನು ಇಟ್ಟು, ನೇರವಾಗಿ ಕುಳಿತು ಆದಷ್ಟು ಆತ್ಮವಿಶ್ವಾಸ, ಒಂದು ಕಿರುನಗೆಯನ್ನು ವ್ಯಕ್ತಪಡಿಸಿ ಹೇಳುವುದು.ದಯವಿಟ್ಟು ಜೋಲುಮೋರೆಯನ್ನು ಮಾತ್ರ ಹಾಕಿಕೊಳ್ಳಬೇಡಿ :-)೪) ನಿಮ್ಮ ರೆಸ್ಯೂಮೆ (ಅಥವಾ ನಿಮ್ಮ ಜಾತಕ, ಅಥವಾ ಹಣೆಬರಹ)ನನ್ನ ಅನುಭವದಲ್ಲಿ ಸುಮಾರು ಐವತ್ತಕ್ಕಿಂತಲೂ ಹೆಚ್ಚು ಜನರನ್ನು ಸಂದರ್ಶನ ಮಾಡಿದ್ದೇನೆ ಹಾಗೂ ಬೇಕಾದಷ್ಟು ಸಂದರ್ಶನವನ್ನು ನಾನೇ ಅಭ್ಯರ್ಥಿಯಾಗಿ ಅಟೆಂಡ್ ಮಾಡಿದ್ದೇನೆ. ನೀವು ಮಾಡಬಹುದಾದ ದೊಡ್ಡ ತಪ್ಪುಗಳಲ್ಲಿ ಸರಿಯಾಗಿ ಸಿದ್ಧಪಡಿಸಿರದ ರೆಸ್ಯೂಮೆಯೂ ಒಂದು. ರೆಸ್ಯೂಮೆ ಅನ್ನೋದು ಅನ್ಯದೇಶೀಯ ಪದ, ಅದರ ಬದಲಿಗೆ bio-data, CV, candidate profile ಇತ್ಯಾದಿಗಳೂ ಬಳಕೆಯಲ್ಲಿವೆ. ಏನೇ ಇರಲಿ, ನೀವು ಎಷ್ಟೇ ದೊಡ್ಡ ಆಪೀಸರರಾಗಿರಲಿ, ಇನ್ನೂ ಈಗಷ್ಟೇ ಕಾಲೇಜು ಬಿಟ್ಟು ಹೊರಗಿನ ಬದುಕನ್ನು ನೋಡುತ್ತಿರಲಿ, ನಿಮ್ಮ ರೆಸ್ಯೂಮೆ ಎರಡು ಪುಟಗಳಿಗಿಂತ ಹೆಚ್ಚಿರುವುದು ಬೇಡ.ನಾನು ಹಲವಾರು ರೆಸ್ಯೂಮೆಗಳಲ್ಲಿ ನೋಡಿದಂತೆ ಅದರಲ್ಲಿ ನಿಮ್ಮ ಪಾಸ್ಪೋರ್ಟ್ ನಂಬರಾಗಲೀ, ಜನ್ಮ ದಿನಾಂಕವನ್ನಾಗಲೀ ನಮೂದಿಸುವುದು ಬೇಡ. ಸಂದರ್ಶನ ನಡೆದು ನೀವು ಹೊರದೇಶಕ್ಕೆ ಹೋಗಲು ಇನ್ನೂ ಬೇಕಾದಷ್ಟು ಸಮಯವಿರೋದರಿಂದ ವೀಸಾಬರುವವರೆಗೆ ಪಾಸ್ಪೋರ್ಟ್ ವಿವರವನ್ನು ನಿಮ್ಮ ಬಳಿಯಲ್ಲೇ ಇಟ್ಟುಕೊಂಡಿರಿ! ನೀವು ನಿಮ್ಮ ರೆಸ್ಯೂಮೆಯಲ್ಲಿ ತೋರಿಸಬೇಕಾದುದು ಮುಖ್ಯವಾಗಿ:* ನಿಮ್ಮ ಹೆಸರು,* ಪೂರ್ಣ ವಿಳಾಸ, ಫೋನ್ ನಂಬರ್, ಇ-ಮೇಲ್ ವಿಳಾಸಗಳ ಸಹಿತ(ನಿಮ್ಮ ಬಳಿ ಇರುವ ಹತ್ತು ಫೋನ್ ನಂಬರುಗಳು, ಇಪ್ಪತ್ತೈದು ಇ-ಮೇಲ್ ವಿಳಾಸಗಳ ಬದಲಿಗೆ ರಿಲೈಯಬಲ್ ಆಗಿರೋ ಒಂದೇ ಒಂದು ಸಾಕು)* ಇದಾದ ಮೇಲೆ ಒಂದು ನೀವು ಯಾರು ಎಂಬುದಕ್ಕೆ ಒಂದು Summary ಯನ್ನು ಕೊಡಿ(ಉದಾಹರಣೆಗೆ: I have X years of experience in <ನಿಮ್ಮ specialty>. I am so and so (ನಿಮ್ಮ current job profile). I have excellent interpersonal, organizational and follow-through skills.(ಎಕ್ಸಲೆಂಟ್ ಎಂದು ತೋರಿಸಿದ್ದರಿಂದ ನಿಮ್ಮ ಸ್ಕಿಲ್ಸ್ ಎಕ್ಸಲೆಂಟ್ ಆಗಿ ಇರಲೇಬೇಕೇ ಎನ್ನುವುದು million dollar ಪ್ರಶ್ನೆ - excellent in comparision to what?)* ನಿಮ್ಮ ಸ್ಕಿಲ್ಸ್ಗಳನ್ನು ಸಮರೈಸ್ ಮಾಡಿ - ಉದಾಹರಣೆಗೆ: hardware/software, speciality (internal medicine, dermatology), engineering... ನಿಮ್ಮ ಇಂಡಸ್ಟ್ರಿಗೆ ಅನ್ವಯವಾಗುವಂತಿರಲಿ.* ನಿಮ್ಮ ವಿದ್ಯಾಭ್ಯಾಸವನ್ನು ಸೂಚ್ಯವಾಗಿ ತಿಳಿಸಿ: ಡಿಗ್ರಿ, specialization, University, Year(ನಿಮ್ಮ ಕ್ಲಾಸಿನಲ್ಲಿ ಎಷ್ಟು ಜನರಿದ್ದರು, ನಿಮ್ಮ ಸ್ನೇಹಿತರ ವಿವರವೆಲ್ಲ ಇಲ್ಲಿ ಬೇಡ)* ನಿಮ್ಮ ಬಳಿ ಯಾವುದಾದರೂ ಸ್ಪೆಷಲೈಸ್ಡ್ ಸರ್ಟಿಫಿಕೇಷನ್ ಗಳಿದ್ದರೆ ಇಲ್ಲಿ ತಿಳಿಸಿ - Cisco, PMP, Java, ಇತ್ಯಾದಿ* ಅನುಭವ (Experience - starting with most current job)ಕಂಪನಿ ಹೆಸರು, ನಿಮ್ಮ ಹುದ್ದೆ, MM/YY - MM/YY ಫಾರ್ಮ್ಯಾಟ್ಅದರ ಕೆಳಗೆ ನಿಮ್ಮ ರೋಲ್ ಅನ್ನು ವಿವರಿಸಿ - ಪ್ರಾಜೆಕ್ಟ್/ಕೆಲಸ/ಕಂಪನಿಯ ಬಗ್ಗೆ ಕಡಿಮೆ ತಿಳಿಸಿ, ನೀವು ಏನು ಮಾಡುತ್ತಿದ್ದೀರಿ/ಮಾಡಿದ್ದಿರಿ ಎಂದು ತಿಳಿಸುವುದು ಒಳ್ಳೆಯದು.ಇದೇ ರೀತಿ ಉಳಿದೆಲ್ಲ ಪ್ರಾಜೆಕ್ಟ್/ಕಂಪನಿಗಳ ಬಗ್ಗೆಯೂ ತಿಳಿಸಿ, ಪ್ರಾಜೆಕ್ಟ್/ಕಂಪನಿ ಹಳೆಯದಾದಷ್ಟೂ ವಿವರ ಕಡಿಮೆ ಇರಲಿ. ನೀವು ಐದು ಅಥವಾ ಹತ್ತು ವರ್ಷದ ಹಿಂದೆ ಮಾಡಿದ ಕೆಲಸ ಬಗ್ಗೆ ಈ ಎಂಪ್ಲಾಯರ್ ಎಷ್ಟು ತಿಳಿದುಕೊಳ್ಳಬೇಕೋ ಅಷ್ಟಿರಲಿ.ನಿಮ್ಮ ಪ್ರಾಜೆಕ್ಟ್ನಲ್ಲಿರುವ ಮಾಡ್ಯೂಲ್ಗಳನ್ನು ವಿವರಿಸಿ ಎಲ್ಲರ ತಲೆ ತಿನ್ನುವ ಪ್ರಯತ್ನ ಮಾಡದೇ, ಸಿಗುವ ಸಮಯ ಹಾಗೂ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ.- ನಿಮ್ಮ ಬಳಿ ಇರುವ ರೆಸ್ಯೂಮೆಯನ್ನು ನೀವು ಅರ್ಜಿ ಹಾಕುವ ಪ್ರತಿಯೊಂದು ಕೆಲಸಕ್ಕೂ ಅನ್ವಯವಾಗುವಂತೆ ಬದಲಾಯಿಸಿ, ಹಾಗೂ ಹಾಗೆ ಬದಲಾಯಿಸಿದ ಪ್ರತಿಯೊಂದನ್ನು ಆ ಕೆಲಸದ ವಿವರಗಳನ್ನೊಳಗೊಂಡ ಪುಟದ ಜೊತೆಯಲ್ಲಿ ಇಟ್ಟುಕೊಳ್ಳಿ. ನೀವು ಹಲವಾರು ಕೆಲಸಕ್ಕೆ ಅರ್ಜಿ ಗುಜರಾಯಿಸಿದ್ದರೆ, ರಿಕ್ರ್ಯೂಟರ್ ಅಥವಾ ಕಂಪನಿಯವರು ಕರೆದಾಗ ನೀವು ಯಾವ ರೆಸ್ಯೂಮೆಯನ್ನು ಅವರಿಗೆ ಕಳಿಸಿದ್ದೀರೆಂದು ನಿಮಗೇ ಗೊತ್ತಿಲ್ಲದಿದ್ದರೆ ಹೇಗೆ?- ಪ್ರತಿ ರೆಸ್ಯೂಮೆ ೯ ಸೆಕೆಂಡ್ ಪರೀಕ್ಷೆಗೆ ಒಳಪಡುತ್ತದೆಯಂತೆ (9 second test), ಅಂದರೆ ನೋಡೋರೇನಿದ್ದರೂ ಕೆಲವೇ ಕ್ಷಣಗಳಲ್ಲಿ ಅದನ್ನು ಗಮನಿಸೋದರಿಂದ ಯಾವಾಗಲೂ ಚಿಕ್ಕ ಹಾಗೂ ಚೊಕ್ಕ ರೆಸ್ಯೂಮೆ ಒಳ್ಳೆಯದು.- ನೀವು ಕೆಲಸಕ್ಕೆ ಅರ್ಜಿ ಹಾಕುವ ದೇಶ/ಭಾಷೆ/ಪರಿಸರವನ್ನು ಗಮನದಲ್ಲಿಟ್ಟುಕೊಂಡಿರಿ - ಭಾರತದಲ್ಲಿ 'ಒಳ್ಳೆಯ' ರೆಸ್ಯೂಮೆ ಅನ್ನಿಸಿಕೊಂಡಿದ್ದು, ಜಪಾನ್, ಅಥವಾ ಅಮೇರಿಕದಲ್ಲೂ ಒಳ್ಳೆಯ ರೆಸ್ಯೂಮೆ ಆಗಬೇಕೆಂದೇನೂ ಇಲ್ಲ, ಉತ್ತರದವರಿಗೆ ಇಷ್ಟವಾದದ್ದು ದಕ್ಷಿಣದವರಿಗೂ, ಪೂರ್ವದ್ದು ಪಶ್ಚಿಮದವರಿಗೂ ಅನ್ವಯವಾಗಬೇಕೆಂದೇನೂ ಇಲ್ಲ.ನಿಮ್ಮ ರೆಸ್ಯೂಮೆಯಲ್ಲಿ ಬಹಳ ಸರಳವಾದ ಫಾಂಟ್ ಹಾಗೂ ವಿನ್ಯಾಸವನ್ನು ಬಳಸಿರಿ - Arial ಅಥವಾ Times New Roman ಫಾಂಟ್ ಬಳಸಿ, ಹನ್ನೆರಡು ಸೈಜ್ ಇದ್ದರೆ ಒಳ್ಳೆಯದು, ಮಾರ್ಜಿನ್ ಬಹಳಷ್ಟು ಬಿಡಿ, Underline, Italicize ಬೇಡ (ಸ್ಕ್ಯಾನ್ ಮಾಡಿದರೆ ಅನುಕೂಲವಾಗಲಿ ಎಂದು), ಕಪ್ಪು ಅಲ್ಲದೇ ಬೇರೆ ಬಣ್ಣವನ್ನು ಬಳಸಲೇ ಬೇಡಿ.***ಹೀಗೆ ನಿಮ್ಮ ರೆಸ್ಯೂಮೆ ನಿಮ್ಮ ಮಾರ್ಕೆಟಿಂಗ್ ಟೂಲ್ ಆಗಿ ನಿಮ್ಮನ್ನು ಹೊರಗಡೆ 'ಸೇಲ್' ಮಾಡುವಲ್ಲಿ ಸಹಾಯಕವಾಗುವುದರಿಂದ ಅದು ಚೆನ್ನಾಗಿರುವಂತೆ ಅಲ್ಲದೇ ನೀವು ಬೆಳೆದ ಹಾಗೆ ಬೆಳೆದಂತೆ ನೋಡಿಕೊಳ್ಳುವುದೂ ಬಹಳ ಮುಖ್ಯ.
ಆತ್ಮ ವಿಶ್ವಾಸ ನಡೆದು ಬಂದ ದಾರಿ ಮತ್ತು ನಡೆ
ಕಳೆದ ಮೂರು ವರ್ಷಗಳಿಗಿಂತ ಹೆಚ್ಚು ಸ್ವಲ್ಪ ಅಲ್ಲಿ-ಹೆಚ್ಚಾಗಿ ಇಲ್ಲಿ ಕೆಲಸ ಮಾಡಿ, ಹಲವಾರು ವರ್ಷಗಳಿಂದ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಎಷ್ಟೋ ಜನರಿಗೆ ಸಲಹೆಗಳನ್ನು ನೀಡುವುದರ ಮೂಲಕ, ನನ್ನ ಅನುಭವಗಳ ಹಿನ್ನೆಲೆಯಲ್ಲಿ, ಓದಿದ ಎಷ್ಟೋ ಪುಸ್ತಕಗಳ ಸಹಾಯದಿಂದ ಹಾಗೂ ನನ್ನನ್ನು ಅಲ್ಲಲ್ಲಿ ಕೈ ಹಿಡಿದು ನಡೆಸಿದ ದೊಡ್ಡವರ ನೆರಳಿನಲ್ಲಿ ನಾನೂ 'ಅಂತರಂಗ'ದಲ್ಲಿ ಪರ್ಸನಲ್ ಡೆವಲಪ್ಮೆಂಟ್, ಕರಿಯರ್ ಡೆವಲಪ್ಮೆಂಟ್ ಬಗ್ಗೆ ಬರೆದರೆ ಹೇಗೆ ಎನ್ನಿಸಿತು. ಇದರಿಂದ ಈ ಅಂಕಣವನ್ನು ಓದೋ ಎಷ್ಟೋ ಜನರಲ್ಲಿ ಕೆಲವರಿಗಾದರೂ ಮಾರ್ಗದರ್ಶನವಾದರೂ ಅದು ತುಂಬಾ ದೂರ ಹೋಗಬಲ್ಲದು. ಈ ನಿಟ್ಟಿನಲ್ಲಿ ಒಂದು ವೇದಿಕೆಯನ್ನು ಸಿದ್ಧ ಪಡಿಸಿ, ಇಲ್ಲಿ ಭಾರತದಲ್ಲಿ ಓದಿ ಭಾರತದಲ್ಲೇ ಕೆಲಸ ಮಾಡುತ್ತಿರುವ, ಮುಂದೆ ಎಂದಾದರೂ ವಿದೇಶಕ್ಕೆ ಬರುವ ಹವಣಿಕೆಯಲ್ಲಿರುವ ಹಾಗೂ ವಿದೇಶಕ್ಕೆ ಈಗಾಗಲೇ ಬಂದು ಇಲ್ಲಿನ ಮ್ಯಾನೇಜ್ಮೆಂಟ್ ಲೆವೆಲ್ಗಳಲ್ಲಿ ಅಲ್ಲಲ್ಲಿ ಕಣಗಳ ಹಾಗೆ ಸಿಕ್ಕಿ ಹಾಕಿಕೊಂಡಿರುವ (ನನ್ನನ್ನೂ ಸೇರಿ) ಕೆಲವರನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಈ ಸರಣಿಯನ್ನು ಬರೆಯುತ್ತಾ ಹೋಗುತ್ತೇನೆ. ಓದುಗರ ಪ್ರತಿಕ್ರಿಯೆಯನ್ನು ಅವಲಂಭಿಸಿ ಈ ಲೇಖನಗಳು ಯಾವ ತಿರುವನ್ನು ಬೇಕಾದರೂ ಪಡೆಯಬಹುದು. ಒಟ್ಟಿನಲ್ಲಿ ನನ್ನ ಸಲಹೆಗಳಿಂದ ನಿಮಗೇನಾದರೂ ಅನುಕೂಲವಾಗುವುದಾದರೆ ಅದು ನನ್ನ ಖುಷಿ, ಲೇಖನದುದ್ದಕ್ಕೂ ಬೋರ್ ಹೊಡೆಸದೆ ಅಲ್ಲಲ್ಲಿ ತಿಳಿ ಹಾಸ್ಯವನ್ನು ತುಂಬಿ ಓದಿಸಿಕೊಂಡು ಹೋಗುವಂತೆ ಮಾಡುವುದು ನನ್ನ ಸವಾಲು.ಪ್ರತಿ ಶನಿವಾರಗಳನ್ನು ಈ ಉದ್ದೇಶಕ್ಕೆ ಇಟ್ಟರೆ ಹೇಗೆ ಎಂದು ಯೋಚಿಸುತ್ತಿದ್ದೇನೆ - ನೋಡೋಣ ಇದು ಎಲ್ಲಿಯವರೆಗೆ ಬರುತ್ತೋ ಎಂದು!ಸೂಚನೆ: ಈ ಲೇಖನಗಳನ್ನು ನಾನು ಹೇಳೋ ಬುದ್ದಿವಾದ ಎಂದು ಓದಿ, ನೀನ್ಯಾವ ದೊಡ್ಡ ಮನುಷ್ಯ? ಎಂದು ನನ್ನನ್ನೇ ಪ್ರಶ್ನಿಸಬೇಡಿ. ಅದರ ಬದಲಿಗೆ ನಾನು 'ಕಲಿತ ಪಾಠ'ಗಳನ್ನು ನಿಮ್ಮ ಮುಂದೆ ಹಂಚಿಕೊಳ್ಳುತ್ತಿದ್ದೇನೆಂದು ಓದಿದರೆ ಬಹಳ ಒಳ್ಳೆಯದು. ಈ ಲೇಖನಗಳಿಂದ ಅನುಕೂಲವಾಗಲಿ ಅನ್ನೋದು ನನ್ನ ಉದ್ದೇಶ, ಆದರೆ use your judgement.೧) ಆತ್ಮವಿಶ್ವಾಸ (confidence)ಸುಮ್ಮನೇ ಒಂದು ಕ್ಷಣ ಯೋಚಿಸಿ: ಭಾರತದಲ್ಲಿ ಇರೋ ಕೋಟ್ಯಾಂತರ ಜನರಲ್ಲಿ ನೀವೂ ಒಬ್ಬ ಇಂಜಿನಿಯರ್ ಅಥವಾ ಮತ್ತ್ಯಾವುದೋ ಪದವೀಧರ, ನಮ್ಮಲ್ಲಿ ಬೇಕಾದಷ್ಟು ಜನರಿಗೆ ಈ ಭಾಗ್ಯ ಇದೆ ಎಂದು ನೀವು ಅಂದುಕೊಂಡರೆ ತಪ್ಪು, ನಿಮ್ಮ ಒಂದನೇ ಕ್ಲಾಸಿನಲ್ಲಿ ಇದ್ದೋರಲ್ಲಿ ಇಂಜಿನಿಯರ್ ಆದವರಲ್ಲಿ ಎಷ್ಟು ಜನ ಎಂದು ಪ್ರಶ್ನಿಸಿಕೊಳ್ಳಿ - ಬೆಂಗಳೂರಿನ ವಾತಾವರಣದಲ್ಲಿ ಬೆಳೆದು ಬಂದವರಿಗೆ ಒಂದು ಉತ್ತರ ದೊರೆಯುತ್ತದೆ, ಆನವಟ್ಟಿಯ ವಾತಾವರಣದಲ್ಲಿ ಬೆಳೆದವರಿಗೆ ಮತ್ತೊಂದು - ಆದರೂ ಇಂದಿಗೂ ಕೋಟ್ಯಾಂತರ ಜನರಿಗೆ ತಮ್ಮ ಹೆಸರನ್ನೇ ಬರೆಯಲು ಬರದಿರುವಾಗ ಅವರೆಲ್ಲರ ಮಧ್ಯೆ ನೀವೊಬ್ಬ ಇಂಜಿನಿಯರ್ ಅಥವಾ ಸ್ನಾತಕೋತ್ತರ ಪದವೀಧರ ಎಂದುಕೊಂಡರೆ ಅದೇ ಮಹಾಭಾಗ್ಯ, ಎಲ್ಲರಿಗೂ ಅದು ದೊರೆಯೋದಿಲ್ಲ, ಅದಕ್ಕೂ ಪಡೆದುಕೊಂಡು ಬರಬೇಕು (ಏನನ್ನು ಅನ್ನೋದು ಇನ್ನೊಂದು ದಿನದ ವಿಷಯ).ಹಾಗೆಯೇ, ಅಮೇರಿಕದಲ್ಲಿ ನೂರಕ್ಕೆ ನೂರು ಸಾಕ್ಷರತೆ ಇದೆ ಎಂದಾಕ್ಷಣ ಇಲ್ಲಿಯ ಚಿತ್ರಣ ಭಾರತಕ್ಕಿಂತ ಏನು ವಿಭಿನ್ನವಲ್ಲ - ಎಲ್ಲ ದೇಶಗಳ ಹಾಗೆ ಇಲ್ಲಿಯೂ ದೊಡ್ಡ ದೊಡ್ಡ ಆಫೀಸರುಗಳಿದ್ದಾರೆ, ರಸ್ತೆಯ ಬದಿಯಲ್ಲಿ ಹಾಟ್ಡಾಗ್ ಮಾರುವವರೂ ಇದ್ದಾರೆ, ಬಹಳಷ್ಟು ಓದಿ ಮುಂದೆ ಬಂದವರೂ ಇದ್ದಾರೆ, ನಿರಕ್ಷರ ಕುಕ್ಷಿಗಳೂ ಇದ್ದಾರೆ.ನೀವು ಭಾರತದಲ್ಲೇ ಕೆಲಸ ಮಾಡಲಿ, ಅಥವಾ ಅಮೇರಿಕಕ್ಕೆ ಓದುವುದಕ್ಕಾಗಿಯೋ, ಅಥವಾ ಕೆಲಸ ಮಾಡುವ ಸಲುವಾಗಿಯೋ ಬಂದವರಾದರೆ ಸದಾ ಆತ್ಮವಿಶ್ವಾಸ ನಿಮ್ಮ ಜೊತೆಯಲ್ಲಿಯೇ ಇರಲಿ. ಪ್ರಪಂಚದಲ್ಲಿ ಎಷ್ಟೋ ಜನರಿಗೆ ಬರದಷ್ಟು ಇಂಗ್ಲೀಷ್ ನಿಮಗೆ ಬರುತ್ತದೆ, ಅಮೇರಿಕದ ೨೩೦+ ಮಿಲಿಯನ್ ಜನರಲ್ಲಿ ಎಲ್ಲರೂ ನಿಮ್ಮ ಹಾಗೆ ಇಂಜಿನಿಯರಿಂಗ್ ಮಾಡಿರೋದಿಲ್ಲ - ನೀವು ವಿದ್ಯಾಭ್ಯಾಸ, ಶಿಸ್ತು, ತಿಳುವಳಿಕೆಗಳಲ್ಲಿ ಈಗಾಗಲೇ ಅದೆಷ್ಟೋ ಜನರಿಗಿಂತ ಮುಂದಿದ್ದೀರಿ ಅನ್ನೋ ಆತ್ಮವಿಶ್ವಾಸ ನಿಮ್ಮಲ್ಲಿರಲಿ. ಈ ವಿಶ್ವಾಸ ದಾಷ್ಟ್ರ್ಯವಾಗಬಾರದು, ವಿನಯದ ಲೇಪನವಂತೂ ಯಾವಾಗಲೂ ಇರಲೇಬೇಕು, ಆದರೆ ನಿಮ್ಮ ಮನಸ್ಸಿನಲ್ಲಿರುವ ಯಾವುದೇ ರೀತಿಯ ಕೀಳರಿಮೆಯನ್ನೂ ಈ ವಿಶ್ವಾಸ ಹೋಗಲಾಡಿಸಲಿ.'ನಾನು ಯಾರಿಗಿಂತಲೂ ಕಡಿಮೆ ಏನೂ ಇಲ್ಲ, I am so happy to be here, I can do it!' ಎಂದು ನಿಮ್ಮಷ್ಟಕ್ಕೆ ನೀವೇ ಹೇಳಿಕೊಳ್ಳಿ/ಹೇಳಿಕೊಳ್ಳುತ್ತಿರಿ.ಈ ಆತ್ಮವಿಶ್ವಾಸವೆನ್ನುವುದು ಸುಮ್ಮನೇ ಹೇಳುವುದಕ್ಕೆ ಮಾತ್ರವಲ್ಲ, ದಿನನಿತ್ಯದ ಬದುಕಿನಲ್ಲೂ ಅಲ್ಲಲ್ಲಿ ನಿಮ್ಮನ್ನು ಕೈ ಹಿಡಿದು ನಡೆಸುತ್ತಲೇ ಇರುತ್ತೆ, ನನ್ನ ಹೈ ಸ್ಕೂಲಿನಲ್ಲಿ ವಿಜ್ಞಾನ ಪಾಠ ಮಾಡುವ ಜ್ಯೋತಿ ಮೇಷ್ಟ್ರು ನನಗೆ ಅತಿಯಾದ ಆತ್ಮವಿಶ್ವಾಸವಿರೋದರಿಂದ ನನಗೆ ಕೆಡುಕಾಗಬಹುದು ಎಂದು ಎಚ್ಚರಿಕೆ ಕೊಟ್ಟಿದ್ದರು. ಆದರೆ ನನಗೆ ಆಗಿದ್ದ ಅತಿಯಾದ ಆತ್ಮವಿಶ್ವಾಸ ಯಾವಾಗಲೂ ಇದ್ದ ಅತಿಯಾದ ಕೀಳರಿಮೆ ಜೊತೆಯಲ್ಲಿ ಕ್ಯಾನ್ಸಲ್ ಆದ್ದರಿಂದ ನನಗೆ ಒಳ್ಳೆಯದೇ ಎನಿಸಿದೆ, ಆದರೆ ನಿಮ್ಮ ಆತ್ಮವಿಶ್ವಾಸ ಅತಿಯಾಗದಿರಲಿ, ಅದು superiority complex ಅನ್ನು ಬೆಳೆಸದಿರಲಿ.೨) ನಡೆದು ಬರೋ ದಾರಿ ಮತ್ತು ಗುರಿ (means and destination)ಭಾರತದಲ್ಲಿ ನಾವೆಲ್ಲರೂ ಒಂದಲ್ಲ ಒಂದು ಕೋರ್ಸುಗಳಲ್ಲಿ ಇಂಜಿನಿಯರಿಂಗೋ ಮತ್ತೊಂದೋ ಪದವಿಯನ್ನು ಆಯ್ದುಕೊಳ್ಳುತ್ತೇವೆ, ಆದರೆ ಅಲ್ಲಿ ಕಲಿತದ್ದಕ್ಕೆ ಅನುಸಾರವಾಗಿ ಮಾಡುವ ಉದ್ಯೋಗಗಳೂ ಇರಲೇಬೇಕೆಂದೇನೂ ಇಲ್ಲ. ಉದಾಹರಣೆಗೆ ಒಬ್ಬ ಕೆಮಿಕಲ್ ಇಂಜಿನಿಯರಿಂಗ್ ಓದಿದವನು ಇನ್ಫರ್ಮೇಷನ್ ಟೆಕ್ನಾಲಜಿಯಲ್ಲಿ ಕೆಲಸ ಮಾಡಬಹುದು, ಅಥವಾ ಒಬ್ಬ ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದಿದವನು ಇನ್ಯಾವುದೋ ಕ್ಷೇತ್ರದಲ್ಲಿ ದುಡಿಯಬಹುದು. ನೀವು ಕಲಿತ ಅಪರೇಟಿಂಗ್ ಸಿಸ್ಟಮ್ ಬೇಸಿಕ್ ಆಗಲಿ, ನೀವು ಬರೆದ ಕಂಪೈಲರ್ ಆಗಲಿ ಅಥವಾ ನೀವೇ ಕಂಡುಹಿಡಿದ ನ್ಯೂಮೆರಿಕಲ್ ಸೊಲ್ಯೂಷನ್ನ್ ಆಗಲಿ ಬಹಳ ದೂರಗಳವರೆಗೆ ನಿಮ್ಮ ಕೈ ಹಿಡಿದು ನಡೆಸಬಲ್ಲದು, ಆದರೆ... ನಿಜ ಜೀವನ ಬಹಳ ಭಿನ್ನವಾದದ್ದು, ನಮ್ಮ ಆಫೀಸಿನಲ್ಲಿ ಹೊಸದಾಗಿ ಕೆಲಸಕ್ಕೆ ಸೇರಿದ ಕಾಲೇಜ್ ಗ್ರ್ಯಾಜುಯೇಟ್ಗಳನ್ನೂ, ಹಲವಾರು ಕಾಲೇಜ್ ಇಂಟರ್ನ್ಗಳನ್ನು ನಾನು ಬಹಳ ಹತ್ತಿರದಿಂದ ಬಲ್ಲೆ. ರಿಯಲ್ ಲೈಫ್ ಅನ್ನೋದು ಶಾಲೆಯಲ್ಲಿ ಓದಿದ ಹಂದರಕ್ಕಿಂತ ಭಿನ್ನವಾದದ್ದು, ನಿಜವಾದ ಬದುಕು ಒಡ್ಡೋ ಸವಾಲುಗಳನ್ನು ಎದುರಿಸೋದಕ್ಕೆ ನಿಮ್ಮನಿಮ್ಮ ವಿದ್ಯೆ ತಯಾರು ಮಾಡಲಿ. ಆಫೀಸಿನಲ್ಲಿ ನಾನು ಮಾಡೋ ಕೆಲಸ ಬಹಳ ಗ್ಲಾಮರಸ್ ಆಗೇನೂ ಕಂಡು ಬರೋದಿಲ್ಲ, ಒಂದು ಪ್ರಾಜೆಕ್ಟಿನ ಸ್ಕೋಪಿನಲ್ಲಿ ಒಬ್ಬ ಕೀ ಪ್ಲೇಯರ್ ಆಗಿ ನನ್ನ ಕೆಲಸವನ್ನು 'ಹೀಗೆ-ಇಂಥದು' ಎಂದು ಈ ಕಾಲೇಜ್ ಗ್ರ್ಯಾಜುಯೇಟ್ಗಳಿಗೆ ವಿವರಿಸೋದಕ್ಕೆ ಮೊದಲು ಸ್ವಲ್ಪ ಕಷ್ಟವಾಗುತ್ತಿತ್ತು. ಆದರೆ keeping the end in mind, ಅಂದರೆ ನಾವು ಮಾಡೋ ಪ್ರಾಜೆಕ್ಟ್ ಕೆಲಸದ ಅಲ್ಟಿಮೇಟ್ ರಿಸಲ್ಟ್ ಅನ್ನು ಮನಸ್ಸಿನಲ್ಲಿಟ್ಟುಕೊಂಡು ದಿನೇ-ದಿನೇ ಮಾಡೋ ಕೆಲಸಗಳನ್ನು ವಿವರಿಸಿದಾಗ ಎಲ್ಲವೂ ಸುಲಭವಾಗುತ್ತದೆ. ಮೇಲ್ನೋಟಕ್ಕೆ ನಾನು ಬರೀ ಇ-ಮೇಲ್ ಗಳನ್ನು ಓದಿ ಉತ್ತರಿಸೋನ ಹಾಗೆ ಕಂಡು ಬಂದರೂ ಪ್ರತಿಯೊಂದು ಇ-ಮೇಲ್ ನ ಹಿನ್ನೆಲೆ, ಅದರ ಬಿಸಿನೆಸ್ ಇಂಪ್ಲಿಕೇಷನ್, ಮುಂದಾಗುವ ಕೆಲಸಗಳನ್ನು ಯೋಚಿಸಿಕೊಂಡಾಗ ಎಲ್ಲವೂ ಸ್ಪಷ್ಟವಾಗುತ್ತದೆ.ಬಹಳಷ್ಟು ಜನರು ಅಂದುಕೊಂಡ ಹಾಗೆ ನಿಜ ಜೀವನದ ಕೆಲಸಗಳು ಒಂದು ಸರಳ ಸಮೀಕರಣವಂತೂ ಅಲ್ಲ. ಅಲ್ಲದೇ ನಾವೂ- ನೀವು ಮಾಡೋ ಕೆಲಸಗಳಲ್ಲಿ ನಮ್ಮ ಗುರಿಗಳನ್ನು ನಾವು ತಲುಪುವಲ್ಲಿ external factors ಬೇಕಾದಷ್ಟು influence ಮಾಡುತ್ತವೆ: ಉದಾಹರಣೆಗೆ ನಾವು ಕೆಲಸ ಮಾಡೋ ಸಂಸ್ಥೆಗಳ ಸಂಸ್ಕೃತಿ ಅಲ್ಲಿನ ಆಗುಹೋಗುಗಳ ಮೇಲೆ ಬಹಳಷ್ಟು ಪರಿಣಾಮ ಬೀರುತ್ತದೆ. ಒಂದು ಲಾಗಿನ್ ಆಕ್ಸೆಸ್ ಸಿಗುವುದಕ್ಕೆ ಒಂದು ದಿನ ಬೇಕಾ! ಎಂದು ಮೂಗಿನ ಮೇಲೆ ಬೆರಳಿಡುವ ಕಾಲೇಜ್ ಗ್ರ್ಯಾಜುಯೇಟ್ಗಳಿಗೆ ಅದರ ಹಿಂದಿನ ಪ್ರಾಸೆಸ್ಸುಗಳನ್ನು ಸುಮಾರು ಎರಡೂವರೆ ಲಕ್ಷ ಜನ ಕೆಲಸ ಮಾಡುವ ನಮ್ಮ Fortune 18 ನೇ ಕಂಪನಿಯಲ್ಲಿ ಹಿನ್ನೆಲೆಯಲ್ಲಿ ವಿವರಿಸುತ್ತೇನೆ, ಆಗ ಅವರುಗಳು ಮತ್ತೊಂದು ರೀತಿಯಲ್ಲಿ ಆಶ್ಚರ್ಯ ಚಕಿತರಾಗುವುದನ್ನೂ ನೋಡಿದ್ದೇನೆ.So, ಒಂದೇ ಸಾಲಿನಲ್ಲಿ ಹೇಳುವುದಾದರೆ - ಗಂಭೀರ ಹಾಗೂ ರಚನಾತ್ಮಕ ಉದ್ದೇಶಗಳುಳ್ಳ ಯಾರೇ ಆದರೂ ಸಾಕಷ್ಟು ಬೇಸರವನ್ನು ಸಹಿಸಿಕೊಳ್ಳಲು ಸಿದ್ಧರಿರಬೇಕು. ಅದು GMAT ನಲ್ಲಿ 800 ಕ್ಕೆ 720 ಸ್ಕೋರು ಮಾಡುವ ಶಾರ್ಟ್ ಟರ್ಮ್ ಗುರಿ ಇರಬಹುದು, ಅಥವಾ ಯಾವುದೋ ಒಂದು ದೊಡ್ಡ ಕಂಪನಿಯಲ್ಲಿ ಸೀನಿಯರ್ ವೈಸ್ ಪ್ರೆಸಿಡೆಂಟ್ ಆಗುವ ಲಾಂಗ್ ಟರ್ಮ್ ಉದ್ದೇಶವಿರಬಹುದು.***ಈ ಬರಹಗಳನ್ನು ಬರೆಯುತ್ತಾ ಬರೆಯುತ್ತಾ ನಾನೂ ಕಲಿಯುತ್ತಿದ್ದೇನೆ, ಈ ರೀತಿ ಹಿಂದೆಲ್ಲೂ ಬರೆದಿಲ್ಲವಾದ್ದರಿಂದ ಭಾಷೆ, ಅದರ ಬಳಕೆಯೂ ನನಗೆ ತೊಂದರೆ ಕೊಡುತ್ತಿದೆ.ಈ ಸರಣಿಯ ಆರಂಭದ ಬಗ್ಗೆ ನಿಮ್ಮ ಅನಿಸಿಕೆಗಳೇನು? ನಿಮಗೆ ಇಂಥ ಲೇಖನಗಳಿಂದ ಏನಾದರೂ ಅನುಕೂಲ ಕಂಡು ಬರುತ್ತಿದೆಯೇ? ನಿಮ್ಮ ಪ್ರಶ್ನೆ-ಸಲಹೆ-ಅನಿಸಿಕೆಗಳನ್ನು ಬರೆಯಿರಿ, ಇಲ್ಲಾ ಇ-ಮೇಲ್ ಮುಖಾಂತರ ನನಗೆ ತಿಳಿಸಿ:santoshgadkar@ibibo.com ***
Subscribe to:
Posts (Atom)